Kannada NewsKarnataka News
ಭೀಕರ ಕಾರು ಅಪಘಾತ: ಅಪಾಯದಿಂದ ಪಾರಾದ ಕರವೇ ಜಿಲ್ಲಾಧ್ಯಕ್ಷ

ಪ್ರಗತಿವಾಹಿನಿ ಸುದ್ದಿ, ಧಾರವಾಡ/ ಬೆಳಗಾವಿ: ನಾಯಿ ಉಳಿಸಲು ಹೋಗಿ ಭೀಕರ ಅಪಘಾತ ಸಂಭವಿಸಿದ್ದು, ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್ ಅಭಿಲಾಶ್ ಅವರ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮಧ್ಯರಾತ್ರಿ 12.30ರ ಹೊತ್ತಿಗೆ ಧಾರವಾಡದ ಹೈಕೋರ್ಟ್ ಬಳಿ ಈ ಅವಘಟ ಸಂಭವಿಸಿದೆ.
ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿರುವಾಗ ನಾಯಿ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಮುಂದೆ ಹೊರಟಿದ್ದ ಕಾರ್ ಗೆ ಡಿಕ್ಕಿಯಾಗಿದೆ. ಕರವೇ ಜಿಲ್ಲಾಧ್ಯಕ್ಷ ಹಾಗೂ ನಟ ಅಭಿಲಾಷ್ ಅವರ “ಕೀಯ” ಕಾರ್ ಪಲ್ಟಿ ಆಗಿದೆ. ಅಭಿಲಾಷ್ ಅವರೆ ಕಾರ್ ಚಲಾಯಿಸುತ್ತಿದ್ದರು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
https://pragati.taskdun.com/border-dispute-legal-action-if-trade-is-interrupted-keep-an-eye-on-social-media/
https://pragati.taskdun.com/appeal-to-the-cm-to-fulfill-the-important-demand-of-transport-employees/




