
ಪ್ರಗತಿವಾಹಿನಿ ಸುದ್ದಿ, ಮುಂಡಗೋಡ: ಮನೆಯ ಅಂಗಳದಲ್ಲೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4 ರಲ್ಲಿ ಯುವಕನ ಭೀಕರ ಹತ್ಯೆಯಾಗಿದೆ. ಡಾಕ್ಪಾ ಯಾನೆ ಲೋಬ್ಸಂಗ್ (35) ಹತ್ಯೆಯಾದ ಯುವಕ.
ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಾಜಿ ಸೈನಿಕ ಗೊನಪೊ ತಿನ್ಲೆ ಚೊಡೆಕ್ (50) ಕೊಲೆ ಮಾಡಿರುವ ಆರೋಪಿ. ಮನೆ ಅಂಗಳದಲ್ಲಿ ಮಾರಕಾಸ್ತ್ರದಿಂದ ಭೀಕರ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




