Belagavi NewsBelgaum NewsCrimeKannada NewsKarnataka News

*ಜತ್ ಜಾಂಬೋಟಿ ಹೆದ್ದಾರಿಯಲ್ಲಿ‌ ಭೀಕರ ರಸ್ತೆ ಅಪಘಾತ; ಇಬ್ಬರ ದುರ್ಮಣರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರು ಮತ್ತು ಬುಲೆರೋ ವಾನಹದ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಜತ್ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ‌ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾಚನ್ನಪ್ಪಿದ್ದಾರೆ. 

ಘಟನೆಯಲ್ಲಿ ರಾಯಬಾಗ ತಾಲೂಕಿನ ದೇವಪೂರಹಳ್ಳಿಯ ರಾಮಪ್ಪ ಮಾಂಗ, ಹಾಗೂ ಕಂಕಣವಾಡಿ ಗ್ರಾಮದ ಶಿವಬಸ್ಸು ಚೌಗಲಾ (65) ಎಂಬುವರು ಸಾವನ್ನಪ್ಪಿದ್ದಾರೆ. 

ಗೋಕಾಕ್ ಕಡೆಯಿಂದ ಮೂಡಲಗಿ ಕಡೆಗೆ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬ್ಯುಲೆರೋ ಚಾಹನ ಚಾಲಕ ಮತ್ತು ಓರ್ವ ಪ್ರಯಾಣಿಕನಿಗೆ ಗಾಯವಾಗಿದೆ, ಕೋಡಲೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಲಗಿ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button