Election NewsKannada NewsKarnataka NewsPolitics

*ಸಿದ್ದರಾಮಯ್ಯ ಸಿಎಂ ಆದಮೇಲೆ ಟೆರರಿಸ್ಟ್ ಆಕ್ಟಿವಿಟಿ ನಡೆಯುತ್ತಿದೆ: ಆರ್ ಅಶೋಕ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಟಿಪ್ಪು ಸಿದ್ದಾಂತವನ್ನ ಇಟ್ಟುಕೊಂಡ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಮೇಲೆ ನಿರಂತರವಾಗಿ ಹಿಂದುಗಳ ಮೇಲೆ ಹಲ್ಲೆ ನಡೆಯುವದು., ಅವಹೇಳನ, ಧಮ್ಕಿ, ಟೆರರಿಸ್ಟ್ ಆಕ್ಟಿವಿಟಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌

ಗುರುವಾರ ಮಧ್ಯಾಹ್ನ 2 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ ಅವರು, ರಾಜ್ಯದಲ್ಲಿ‌ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಸ್ಲಾಮಿಕ್ ಸಂಘಟನೆಗಳ, ಪಾಕಿಸ್ತಾನ್ ಬೆಂಬಲಿತ ಕಾರ್ಯಕರ್ತರುಗಳ, ದೌರ್ಜನ್ಯ ಹಿಂದುಗಳ ಮೇಲೆ ಹೆಚ್ಚಾಗಿದೆ. ದೇಶದ ಜನ‌ ನಿನ್ನೆ ರಾಮನವಮಿ ಆಚರಿಸುವಾಗ, ವಿದ್ಯಾರಣ್ಯಪುರದಲ್ಲಿ ಜೈಶ್ರೀರಾಮ್ ಎಂದು ಹೇಳಿದಕ್ಕೆ ಅಲ್ಲಾ ಹು ಅಕ್ಬರ್ ಎನ್ನಬೇಕು ಎಂದು ಕಾರನ್ನು ನಿಲ್ಲಿಸಿ, ಮುಸ್ಲಿಂ ಯುವಕರು ಧಮ್ಕಿ‌ ಹಾಕಿದ್ದಾರೆ. ಇದನ್ನ ನೋಡಿದರೆ ನಾವು ಹಿಂದೂಸ್ತಾನ್ ನಲ್ಲಿ ಇದ್ದೇವಾ ? ಪಾಕಿಸ್ತಾನ್ ನಲ್ಲಿ ಇದ್ದೇವಾ ? ಎಂದು ಅನುಮಾನ‌ ಶುರು ಆಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.‌

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button