GIT add 2024-1
Beereshwara 33

*ಕರಡಿ ದಾಳಿಗೆ ವೃದ್ಧ ಸಾವು: ದೇವಸ್ಥಾನದ ಬಾಗಿಲು ಹಾಕಿ ಕರಡಿ ಸೆರೆಹಿಡಿದ ಗ್ರಾಮಸ್ಥರು*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ವೃದ್ಧನ ಮೇಲೆ ಕರಡಿ ದಾಳಿ ಪರಿಣಾಮ ದಾಳಿಗೆ ಒಳಗಾದ ವೃದ್ಧ ಚೆನ್ನಪ್ಪ ಮಡಿವಾಳರ್ (74) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.‌

ಗುರುವಾರ ಬೆಳಗ್ಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ರಾಂಪುರ ಗ್ರಾಮದ ಹೊರವಲಯದ ಕೆರೆ ಬಳಿ ಇರುವ ಆಂಜನೇಯ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಗ್ರಾಮಸ್ಥರು ಕರಡಿಯನ್ನು ದೇವಸ್ಥಾನದಲ್ಲಿ ಸೆರೆ ಹಿಡಿದಿದ್ದಾರೆ.‌ ದೇವಸ್ಥಾನದ ಬಾಗಿಲು ಹಾಕಿದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.‌

Emergency Service

ಅಧಿಕಾರಿಗಳು ಕರಡಿ ಸೆರೆ ಹಿಡಿಯಲು ಬೋನು ಇಟ್ಟು ನಿಂತಿದ್ದರು ಈ ಸಮಯದಲ್ಲಿ ತಪ್ಪಿಸಿಕೊಂಡ ಕರಡಿ ವೃದ್ಧನ ಮೇಲೆ ದಾಳಿ‌ ಮಾಡಿದೆ.‌ ಕೂಡಲೇ ವೃದ್ಧನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಮೃತಪಟ್ಟಿದ್ದಾರೆ.‌

ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.‌ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.‌ ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Laxmi Tai add
Bottom Add3
Bottom Ad 2