Latest

ಭಯೋತ್ಪಾದಕನಿಗೆ ಭರ್ಜರಿ ಗೋರಿ; ತನಿಖೆಗೆ ಮಹಾರಾಷ್ಟ್ರ ಸರಕಾರದ ಆದೇಶ

ಪ್ರಗತಿವಾಹಿನಿ ಸುದ್ದಿ, ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ, ಭಯೋತ್ಪಾದಕ ಯಾಕೂಬ್ ಮೆಮನ್ ಗೋರಿಗೆ ಭರ್ಜರಿ ಸಿಂಗಾರ ಮಾಡಿ ‘ಮಜಾರ್’ ಪ್ರಾರ್ಥನಾ ಮಂದಿರವಾಗಿಸಿರುವುದಕ್ಕೆ ಮಹಾರಾಷ್ಟ್ರ ಸರಕಾರ ಕಿಡಿಯಾಗಿದೆ.

ಗೋರಿ ಸುತ್ತ ಅಳವಡಿಸಿದ ಅಲಂಕಾರದ ಹಾಗೂ ಎಲ್ ಇಡಿ ಲೈಟ್ ಗಳನ್ನು ಸರಕಾರದ ಆದೇಶದನ್ವಯ ಈಗಾಗಲೇ ಮುಂಬೈ ಪೊಲೀಸರು ಕಿತ್ತೆಸೆದಿದ್ದು ಈ ಕುರಿತು ವಿವರ ತನಿಖೆ ಕೈಗೊಂಡು ವರದಿ ಸಲ್ಲಿಸಲು ರಾಜ್ಯ ಗೃಹ ಇಲಾಖೆ  ಆದೇಶಿಸಿದೆ.

ಭಯೋತ್ಪಾದಕನ ಗೋರಿ ಅದ್ದೂರಿ ಬಗ್ಗೆ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆದ ನಂತರ ಈ ಬೆಳವಣಿಗೆಗಳು ನಡೆದಿವೆ. ಈ ಹಿಂದೆ ಇದ್ದ ಗೋರಿ ಹಾಗೂ ಈಗ ಟೈಲ್ಸ್ ಅಳವಡಿಸಿ ಸಿಂಗಾರ ಮಾಡಲಾಗಿದ್ದನ್ನು ಜಾಲತಾಣಗಳಲ್ಇ ವೈರಲ್ ಮಾಡಲಾಗಿತ್ತು.

ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ  ಅವಧಿಯಲ್ಲಿ 1993ರಲ್ಲಿ ಮುಂಬೈನಲ್ಲಿ ಬಾಂಬ್ ದಾಳಿ ನಡೆಸಿದ ಭೀಕರ ಭಯೋತ್ಪಾದಕ ಯಾಕೂಬ್ ಮೆಮನ್ ಸಮಾಧಿಯನ್ನು ಮಜಾರ್ ಆಗಿ ಪರಿವರ್ತಿಸಲಾಗಿರುವುದಾಗಿ ಆಡಳಿತ ಪಕ್ಷದವರು ದೂರಿದ್ದಾರೆ.

ಯಾಕೂಬ್ ಮೆಮನ್‌ನನ್ನು 2015 ರಲ್ಲಿ ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. 1993 ರಲ್ಲಿ ಮುಂಬೈನಲ್ಲಿ 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಯಿತು.

ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಮತ್ತು ಮುಂಬೈನ ಮೆರೈನ್ ಲೈನ್ಸ್ ಪ್ರದೇಶದ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

T20I ಪಂದ್ಯದಲ್ಲಿ ಭಾರತೀಯರ ಗರಿಷ್ಠ ಸ್ಕೋರ್ ದಾಖಲಿಸಿದ ವಿರಾಟ್ ಕೊಹ್ಲಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button