Kannada NewsNational

*ಅಣ್ಣ-ಅತ್ತಿಗೆ ಆತ್ಮಹತ್ಯೆ ಪ್ರಕರಣ; ತನಿಖೆಗೆ ಪೊಲೀಸರ ವಿಳಂಬ; ಬೆರಳನ್ನೆ ಕತ್ತರಿಸಿಕೊಂಡ ಮನನೊಂದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ; ಥಾಣೆ: ಅಣ್ಣ-ಅತ್ತಿಗೆಯ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟಿಸಿದ ವ್ಯಕ್ತೊಯೊಬ್ಬ ಮನನೊಂದು ತನ್ನ ಬೆರಳನ್ನೇ ಕತ್ತರಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಧನಂಜಯ ನಾನಾವರೆ ಬೆರಳು ಕತ್ತರಿಸಿಕೊಂಡಿರುವ ವ್ಯಕ್ತಿ. ಆಗಸ್ಟ್ .1ರಂದು ಧನಂಜಯ್ ಅವರ ಅಣ್ಣ ನಂದಕುಮಾರ್ ನಾನಾವರೆ ಹಾಗೂ ಅವರ ಪತ್ನಿ ಉಜ್ವಲಾ ನಾನಾವರೆ ಥಾಣೆಯಲ್ಲಿನ ಉಲ್ಲಾಸನಗರದಲ್ಲಿರುವ ಮನೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಬರೆದಿಟ್ತಿದ್ದ ಡೆತ್ ನೋಟ್ ಪತ್ತೆಯಾಗಿತ್ತು. ಆದರೂ ಪೊಲೀಸರು ಪ್ರಕರಣದ ತನಿಖೆಗೆ ವಿಳಂಬ ಮಾಡುತ್ತಿದ್ದರು.

ಪ್ರಕರಣದ ತನಿಖೆ ನಡೆಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಂದಕುಮಾರ್ ಸಹೋದರ ಧನಂಜಯ ನಾನವರೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ತನ್ನ ಬೆರಳನ್ನು ಕತ್ತರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಅಣ್ಣ-ಅತ್ತಿಗೆಸಾವಿಗೆ ಸಚಿವರೊಬ್ಬರು ಕಾರಣ ಎಂದು ಆರೋಪಿಸಿದ್ದಾರೆ. ಆದರೆ ಪೊಲಿಸರು ಅವರ ವಿರುದ್ಧ ವಾಯುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೀಗೆ ತನ್ನ ದೇಹದ ಅಂಗಾಂಗವನ್ನೇ ಕತ್ತರಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದ್ದ ನಾಲ್ವರು ಆರೊಪಿಗಳನ್ನು ಬಂಧಿಸಿದ್ದಾರೆ. ಕಮಲೇಶ್ ನಿಕಮ್, ನರೇಶ್ ಗಾಯಕವಾಡ, ಗಣಪತಿ ಕಾಂಬಳೆ ಹಾಗೂ ಶಶಿಕಾಂತ್ ಬಂಧಿತರು.

ಬೆರಳು ಕತ್ತರಿಸಿಕೊಂಡು ಗಾಯಗೊಂಡಿರುವ ಧನಂಜಯ್ ನಾನವರೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button