*ದಿ. ಸುರೇಶ್ ಅಂಗಡಿಯವರ ಒಳ್ಳೆಯತನದಿಂದ ನನಗೆ ಜಯ ಸಿಕ್ಕಿದೆ: ಜಗದೀಶ್ ಶೆಟ್ಟರ್*
ಪ್ರಗತಿವಾಹಿನಿ ಸುದ್ದಿ: ದಿ. ಸುರೇಶ್ ಅಂಗಡಿಯವರ ಕೆಲಸ, ಕಾರ್ಯಗಳು ಇವತ್ತು ಜನ ನೆನಪು ಮಾಡಿಕೊಳ್ಳುತ್ತಾರೆ. ಅವರ ಒಂದು ಒಳ್ಳೆಯತನದಿಂದ ನನಗೆ ಜಯ ಸಿಕ್ಕಿದೆ ಎಂದು ನೂತನ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನರು ಅಭೂತಪೂರ್ವ ಜಯ ತಂದು ಕೊಟ್ಟಿದ್ದಾರೆ. ಯಾರು ಕೂಡ ನಿರೀಕ್ಷೆ ಮಾಡದಷ್ಟು 1.8 ಲಕ್ಷಕ್ಕೂ ಹೆಚ್ಚು ಲೀಡ್ ನಲ್ಲಿ ಗೆಲ್ಲಿಸಿದ್ದಾರೆ. ಹಣದ ಬಲ, ಅಧಿಕಾರದ ಬಲವನ್ನು ಮೀರಿ ಜನರು, ದೇಶದ ನಾಯಕತ್ವದ ಮೇಲೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ಗೆಲ್ಲಿಸಿದ್ದಾರೆ ಎಂದರು.
ಇದು ಜನತೆಯ ಜಯ, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಜನ ಬೆಂಬಲ ಸಿಕ್ಕಿದೆ. ದಿ. ಸುರೇಶ ಅಂಗಡಿ ಯವರಿಗೆ ಜನ ಬೆಂಬಲ ತೋರಿಸಿದ ರೀತಿಯಲ್ಲಿ ನಮಗೂ ಬೆಂಬಲ ನೀಡಿದ್ದಾರೆ. ಜನರ ಪ್ರೀತಿ ವಿಶ್ವಾಸವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದು ನುಡಿದರು.
ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ 72 ಸಾವಿರಕ್ಕೂ ಹೆಚ್ಚು ಲೀಡ್ ಸಿಕ್ಕಿದೆ. ಅಭಯ ಪಾಟೀಲ್ ರು ಹೆಚ್ಚು ಲೀಡ್ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಮಂತ್ರಿ ಮಗ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರು ಅಲ್ಲಿಯೂ ಕೂಡಾ ಬಿಜೆಪಿಗೆ 50 ಸಾವಿರಕ್ಕೂ ಹೆಚ್ಚು ಲೀಡ್ ಸಿಕ್ಕಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ್, ಧನಂಜಯ ಜಾಧವ್ ಸೇರಿದಂತೆ ಇತರೆ ನಾಯಕರ ನೇತೃತ್ವದಲ್ಲಿ ಜನ ಬೆಂಬಲ ಸಿಕ್ಕಿದೆ. ಅದೇ ರೀತಿ ಗೋಕಾಕ್ ಮತ ಕ್ಷೇತ್ರದಲ್ಲಿ 23 ಸಾವಿರ ಕ್ಕೂ ಹೆಚ್ಚು ಹಾಗೂ ಅರಬಾವಿ ಮತ ಕ್ಷೇತ್ರದಲ್ಲಿ 21 ಸಾವಿರಕ್ಕೂ ಹೆಚ್ಚು ಲೀಡ್ ನೀಡಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಅವರು ಲೀಡ್ ಕೊಡಿಸಿದ್ದಾರೆ. ಅರಭಾವಿ ಮತ ಕ್ಷೇತ್ರದಲ್ಲಿ ಶಾಕಸ ಬಾಲಚಂದರ್ರ ಜಾರಕಿಹೊಳಿ ಅವರು, ಉತ್ತಮ ಸಂಘಟನೆ ಮಾಡಿ ಹೆಚ್ಚು ಬೆಂಬಲ ನೀಡಿದ್ದಾರೆ. ಬೈಲಹೊಂಗಲ ಮತ ಕ್ಷೇತ್ರದಲ್ಲಿ 21 ಸಾವಿರಕ್ಕೂ ಹೆಚ್ಚು ಲೀಡ್ ನೀಡಿದ್ದಾರೆ. ಬೈಲಹೊಂಗಲ ಕ್ಷೇತ್ರದಲ್ಲಿ ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದ್ದರಿಂದ ಲೀಡ್ ಸಿಕ್ಕಿದೆ. ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಲೀಡ್ ಸಿಕ್ಕಿದೆ. ಅನೀಲ್ ಬೆನಕೆ, ಮುರಗೇಂದ್ರಗೌಡಾ ಪಾಟೀಲ್ ಸೇರಿದಂತೆ ಅನೇಕರು ಸಂಘಟನೆ ಮಾಡಿ ಲೀಡ್ ನೀಡಿದ್ದಾರೆ. ರಾಮದುರ್ಗ ಮತ ಕ್ಷೇತ್ರದಲ್ಲಿ ಕೂಡ ಸಮ ಬಲದ ಸ್ಪರ್ಧೆ ಆಗಿದೆ. ನಮಗೆ ಸವದತ್ತಿ ಮತ ಕ್ಷೇತ್ರದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. 16 ಸಾವಿರ ಮತಗಳ ಅಂತರದಿಂದ ಸವದತ್ತಿಯಲ್ಲಿ ಹಿನ್ನಡೆ ಆಗಿದೆ ಎಂದರು.
ಪ್ರಭಾಕರ ಕೊರೆ ಯವರು, ಮಹಾಂತೇಶ ಕವಟಗಿಮಠ ಅವರು, ಹೆಚ್ಚು ಗಮನಹರಿಸಿದರಿಂದ ಹೆಚ್ಚು ಜನ ಬೆಂಬಲ ವ್ಯಕ್ತವಾಗಿವೆ.ಹಿರಿಯರಾದ ಎಂಬಿ ಜಿರಳಿ, ಮುತಾಲಿಕ ವಕೀಲರು ಸಂಘಟನೆ ಮಾಡಿ, ಜಯ ನೀಡಿದ್ದಾರೆ. ಬೆಳಗಾವಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶುಭಾಶ ಪಾಟೀಲ್ ಹೆಚ್ಚು ಆಸಕ್ತಿ ವಹಿಸಿ ಶ್ರಮಿಸಿದ್ದಾರೆ. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಶಾಸಕರು, ಮಾಜಿ ಶಾಸಕರು ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು
ಕನ್ನಡ, ಮರಾಠಿ ಭಾಷಿಕರು, ಎಲ್ಲಾ ವರ್ಗದ ಜನಾಂಗದವರು ರಾಷ್ಟ್ರೀಯ ನಾಯಕತ್ವಕ್ಕಾಗಿ ಬೆಂಬಲ ನೀಡಿದ್ದಾರೆ. ಮುಂದೆ ನಾನು ಬೆಳಗಾವಿ ಲೋಕಸಭಾ ಕ್ಷೇತ್ರದ ಮಾದರಿ ಕ್ಷೇತ್ರ ಮಾಡುವ ಕನಸು ಏನು ಇದೆ, ಅದಕ್ಕೆ ಇಂದಿನಿಂದ ನಾನು ಶ್ರಮೀಸುತ್ತೇನೆ. ಇಂದೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡುವೆ. ನಾಳೆ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದು ಕೇಂದ್ರ ಯೋಜನೆಗಳ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ಯಾವ ಹಂತಕ್ಕೆ ಬಂದಿದೆ ಎಂದು ನೋಡುತ್ತೇವೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಬೆಳಗಾವಿ ಸೇರಿಸಿ ತ್ರಿವಳಿ ನಗರ ಮಾಡುವ ಗುರಿ ಹೊಂದಿದ್ದೇನೆ. ಬೆಳಗಾವಿಯನ್ನು ಎರಡನೆಯ ರಾಜಧಾನಿ ಮಾಡುವ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಜೆಡಿಎಸ್ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ, ರಾಜ್ಯ ಮಾಜಿ ವಕ್ತಾರ ಎಂ.ಬಿ ಜಿರಳಿ, ಮುಖಂಡರಾದ, ರಾಜೇಂದ್ರ ಹುರಕುಣಿ, ಮಾಜಿ ಬುಡಾ ಅಧ್ಯಕ್ಷ ಬುಳಾಪ್ಪ ಹೊಸಮನಿ, ಸೌರಭ ಚೋಪ್ರಾ, ಮುರಗೇಂದ್ರ ಗೌಡಾ ಪಾಟೀಲ್, ಹನಮಂತ ಕೊಗಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ