Latest

*ಮಹದಾಯಿ ವಿಚಾರ; ಈಗ ಲೋಪದೋಷ ಹುಡುಕುವುದು ಕಾಂಗ್ರೆಸ್ ಮನಸ್ಥಿತಿಯನ್ನು ತೋರುತ್ತದೆ; ಸಿಎಂ ಕಿಡಿ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಮಹದಾಯಿ ನದಿ ನೀರಿನ ವಿಚಾರವಾಗಿ ಕಾಂಗ್ರೆಸ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ನಾಯಕರು ಈ ಹಂತದಲ್ಲಿ ಹೋರಾಟ ನಡೆಸಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಹದಾಯಿ ಯೋಜನೆ ವಿಚಾರದಲ್ಲಿ ಡಿಪಿಆರ್ ಗೆ ಒಪ್ಪಿಗೆ ನೀಡಿರುವ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಆದರೂ ಕಾಂಗ್ರೆಸ್ ನಾಯಕರು ಯಾವ ಉದ್ದೇಶಕ್ಕಾಗಿ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.

ಮಹದಾಯಿಗಾಗಿ ನಾವೂ ಹೋರಾಟ ಮಾಡಿದ್ದೆವು, ಅವರೂ ಮಾಡಿದ್ದರು. ಹೋರಾಟಕ್ಕೆ ಈಗ ತಾರ್ಕಿಕ ಜಯ ಸಿಕ್ಕಿದೆ. ಈ ವೇಳೆ ಲೋಪದೋಷ ಹುಡುಕುವುದು ಅವರ ಮನಸ್ಥಿತಿಯನ್ನು ತೋರುತ್ತದೆ. ಕಾಂಗ್ರೆಸ್ ನಾಯಕರ ಟೀಕೆ, ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳಲ್ಲ. MOF ಕ್ಲಿಯರನ್ಸ್ ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

*ಹೊಸ ವರ್ಷಾಚರಣೆ ವೇಳೆ ದುರಂತ; ಕಟ್ಟಡದಿಂದ ಬಿದ್ದು ಯುವಕ ದುರ್ಮರಣ*

Home add -Advt

https://pragati.taskdun.com/new-yearpartyyouthdeathbangalore/

Related Articles

Back to top button