Belagavi NewsBelgaum NewsCrimeKannada NewsKarnataka NewsLife StyleNational

*ಹಣ ಡಬ್ಲಿಂಗ್ ಮಾಡಿಕೊಡುವದಾಗಿ ಮೋಸ: ಇಬ್ಬರು ಪೊಲೀಸರು ಸೇರಿ 7 ಜನರ ಬಂಧನ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರಿಗೆ  ಹಣ ನಾಲ್ಕು ಪಟ್ಟು ಮಾಡಿಕೊಡುತ್ತೇವೆ ಎಂದು ನಂಬಿಸಿ ವಂಚಿಸುತ್ತಿದ್ದ ಏಳು ಜನರನ್ನು ಬೆಳಗಾವಿಯ ಗೋಕಾಕ ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗೋಕಾಕ ಶಹರದ ಶ್ರೀನಗರದಲ್ಲಿ ಆರೋಪಿಗಳಾದ ಪರಶುರಾಮ ಭೀಮಶಿ ಬಡಕರಿ (36), ಇಮ್ರಾನ ಬಾಬಾಜಾನ ಜುನೇದಿ (27), ಜಯಶ್ರೀ ಬಾಬು ಕಾಂಬಳೆ (40),  ಮನೀಷಾ ರಾಜು ಗಾಯಕವಾಡ ಉರ್ಫ ಮಾರ್ಗೇರೆಟ್ ಡೆವಿಡ್ ಗಾಯಕವಾಡ (41) ಉಜ್ವಲಾ ತುಳಸಿರಾಮ ಬಿಲಾನೆ (55), ಮಹಾರಾಷ್ಟ್ರ ಮೂಲದ ಪೊಲೀಸ್ ಪದೇಗಳಾದ ಅನಂತ ಪ್ರಕಾಶ ನರವಾಡೆ (40) , ದಿಲದಾರ ರಬ್ಬಾನಿ ಶೇಖ (35), ಎಂಬತರನ್ನು ಬಂಧಿಸಲಾಗಿದ್ದು, ಗೋಕಾಕ ಮೂಲದ ಮೆಹಬೂಬ ರಫೀಕ ದೇಸಾಯಿ ಪರಾರಿಯಾಗಿದ್ದಾನೆ.

Home add -Advt

ದಾಳಿ ಮಾಡಿ 7ಜನರಿಗೆ ಬಂಧಿಸಿ ಅವರಿಂದ  ಮಷೀನ, ಎನ್ವಲಪ್‌ದಲ್ಲಿ ಬಿಳಿ ಹಾಳೆಗಳಿರುವ ಬ್ಯಾಗ್, ಕಪ್ಪು ಬಣ್ಣದ ಬಾಟಲುಗಳಿರುವ ಬ್ಯಾಗ್, ಟಿಕ್ಷೆಗಳಿರುವ ಬಾಕ್ಸ್, ಅಸಲಿ 4 ನೋಟು, 8 ಮೊಬೈಲ್ ಮತ್ತು ಒಟ್ಟು 2,520ರೂ ಹಣವನ್ನು ಜಪ್ತ ಮಾಡಲಾಗಿದೆ.

ಅವರ ಮೇಲೆ ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 91/2026 ಕಲಂ: 318(2)ಬಿಎನ್‌ಸ್ ಕ್ಕೆ ಪ್ರಕರಣ ದಾಖಲಿಸಿ 7ಜನರಿಗೆ ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ.

Related Articles

Back to top button