Belagavi NewsBelgaum NewsCrimeKannada NewsKarnataka News

*7 ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿದ ಸ್ಥಳದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ 7 ಜನ ಅಂತರಾಜ್ಯ ಕಳ್ಳರನ್ನು ಹಾರುಗೇರೆ ಪೊಲೀಸರು ಬಂಧಿಸಿದ್ದಾರೆ.

ಹಾರೂಗೇರಿ ಪಟ್ಟಣದ ವಿದ್ಯಾನಗರದಲ್ಲಿರುವ ಮನೆಯ ಕೀಲಿ ಮುರಿದು ಮನೆಯ ಒಳಗಡೆ ಹೋಗಿ ಟ್ರೇಜಜರಿಯಲ್ಲಿದ್ದ  22 ಲಕ್ಷ ರೂಪಾಯಿ ಮೌಲ್ಯದ 28 ತೊಲೆ ಬಂಗಾರದ ಆಭರಣಗಳು ಮತ್ತು 1,30,000 ಮೌಲ್ಯದ 1.5 ಕೆಜಿ ಬೆಳ್ಳಿ ಪೂಜಾ ಸಾಮಗ್ರಿಗಳು ಹಾಗೂ  ಕಳ್ಳತನವದ ಬಗ್ಗೆ ದೂರು ದಾಖಲಾಗಿತ್ತು. 

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ತಂಡವನ್ನು ರಚನೆ ಮಾಡಿ ಆರೋಪಿಗಳಾದ ಮಹಾರಾಷ್ಟ್ರ ಮೂಲದ ರವಿ ಅಣ್ಣಾ ಶಿಂಧೆ (32), ಸುನೀಲ ನಾಥಾ ಪವಾರ (27), ಶಂಕರ @ ಬಿಹಾರಿ ತಂದೆ ಸಾಯಿಬಾ ಜಾಧವ (25), ದಿಲೀಪ್ ತುಕಾರಾಮ ಶಿಂಧೆ (25), ಕಿಶೋರ ರಾಜಬಹು ಮೋರೆ (27) ವಿನೋದ ಗಂಗಾರಾಮ ಶಿಂಧೆ (23), ಮೀಥುನ ಚಿಮ್ಮಾಜಿ ಜಾಧವ ಎಂಬ ಆರು ಜನ ಆಪಿಗಳನ್ನು ಬಂಧಿಸಲಾಗಿದೆ.

ಬಂದಿತರಿಂದ  36.11.830  ರೂಪಾಯಿ ಮೌಲ್ಯದ ಚಿನ್ನಭರಣ ಹಾಗೂ ಕಾರ್ ವಶಪಡಿಸಿಕೊಳ್ಳಲಾಗಿದೆ.

ಬಂದನವಾದ ಆರೋಪಿಗಳು ಅಥಣಿ ಪಟ್ಟಣ, ಉಗಾರ. ರಬಕವಿ, ಚಿಕ್ಕಮಂಗಳೂರು, ಗುಲ್ಬರ್ಗಾ, ವಿಜಯಪೂರ. ಕೋಲಾರ. ಹರಪ್ಪನಹಳ್ಳಿ, ಚಿತ್ರದುರ್ಗ, ರಾಮನಗರ, ತುಮಕೂರ, ಬಾಗಲಕೋಟ, ದಾವಣಗೇರೆ, ಗದಗ, ಹಾಸನ, ಮುಂತಾದ ಕಡೆಗಳಲ್ಲಿ ಸಹ ಕಳ್ಳತನ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button