Latest

ರಾಜ್ಯದ ಆಡಳಿತ ನಡೆಯುತ್ತಿರುವುದು ಶರಣತತ್ವದ ಆಧಾರದಲ್ಲಿ

ಪ್ರಗತಿವಾಹಿನಿ ಸುದ್ದಿ, ಹಾವೇರಿ: “ಸರ್ವರಿಗೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಮೂಲಕ ಶರಣರ ತತ್ವಗಳನ್ನು ಆಧರಿಸಿ ರಾಜ್ಯದ ಆಡಳಿತ ನಡೆಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

ಶಿಗ್ಗಾವಿಯ ವಿರಕ್ತ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
“ಶಿಗ್ಗಾವಿ ವಿರಕ್ತ ಮಠ ಶಿಗ್ಗಾವಿಯ ಪ್ರತಿ ವಿದ್ಯಮಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ.‌ ಇಲ್ಲಿನ ಶ್ರೀ ಸಂಗನಬಸವನ ಸ್ವಾಮೀಜಿ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ನಮ್ಮ ಕೆರೆ ಅಭಿವೃದ್ಧಿ, ಗ್ರಾಮೀಣ ಭಾಗದಲ್ಲಿ ವನೀಕರಣ ಇತ್ಯಾದಿ ಕಾರ್ಯಗಳು ಶ್ಲಾಘನೀಯ. ಶ್ರೀಗಳು ಗಿಡಗಳಿಗೆ ಮಕ್ಕಳ ಹೆಸರಿಡುವಂತೆ ನೀಡಿದ ಸಲಹೆಯನ್ನು ಅನುಷ್ಠಾನದಲ್ಲಿ ತರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿದರು.

“ವಿಜಯಪುರದಲ್ಲಿ 40 ವರ್ಷಗಳ ಅವಧಿಯ ಸಮಸ್ಯೆಗೆ ಪರಿಹಾರ ನೀಡಿದ್ದೇನೆ. ಅದರಿಂದ ಅಲ್ಲಿನ ಜನರು ಖುಷಿಯಿಂದ ಸನ್ಮಾನ ಮಾಡಿದರು. ಅದಕ್ಕೆ ನಮ್ಮ ಕ್ಷೇತ್ರದ ಜನರೇ ಕಾರಣ. ನಾನು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಪ್ರತಿದಿನ ಒಂದು ಹೊಸ ಸವಾಲು ಬಂದರೂ ಅದನ್ನು ಎದುರಿಸಿ ಜಯ ಸಾಧಿಸಿದ್ದೇನೆ” ಎಂದು ಬೊಮ್ಮಾಯಿ ಹೇಳಿದರು.

“ಯಾವ ದೇಶದಲ್ಲಿ ಚಾರಿತ್ರ್ಯ ಇಲ್ಲವೊ ಆ ದೇಶ ಅಧೊಗತಿಗೆ ಇಳಿಯುತ್ತದೆ. ನಮ್ಮಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಸಾಕಷ್ಟು ಸಂಘರ್ಷಗಳು ನಡೆಯುತ್ತವೆ. ಅದನ್ನು ಸಮನ್ವತೆಯಿಂದ ಬಗೆಹರಿಸಿಕೊಳ್ಳುವ ಮನಸ್ಥಿತಿ ಹೊಂದಬೇಕು. ನಾವು ಅಸ್ತಿತ್ವಕ್ಕಾಗಿ ಬಡಿದಾಡುತ್ತಿದ್ದೇವೆ. ಇದರಿಂದ ಇಡೀ ಜೀವನದ ಹೋರಾಟ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸಮಾಜದಲ್ಲಿ ಕಿಂಚಿತ್ತಾದರೂ ಬದಲಾವಣೆ ತರುವ ನಿಟ್ಟಿನಲ್ಲಿ
ಶರಣ ಸಂಸ್ಕೃತಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ, ಹೆಬ್ಬಾಳದ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಅಗಡಿ ಸ್ವಾಮೀಜಿ ಹಾಜರಿದ್ದರು.

https://pragati.taskdun.com/apmc-police-arrest-2-thives/
https://pragati.taskdun.com/scientists-have-discovered-making-electricity-from-thin-air/
https://pragati.taskdun.com/wildfire-case-in-karnataka-the-forest-department-released-shocking-statistics/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button