ಸಿಎಂ ಮನೆ ಕದ ತಟ್ಟಿದ ಶಾಸಕರ ದಂಡು
ಪ್ರಗತಿವಾಹಿನಿ ಸುದ್ದಿ- ಬೆಂಗಳೂರು : ಸಚಿವ ಸ್ಥಾನದ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ರವಾನಿಸಲಿದ್ದು, ಸಚಿವ ಸ್ಥಾನದ ಆಕಾಕಾಂಕ್ಷಿಗಳ ಆತಂಕ ಹೆಚ್ಚಾಗಿದೆ. ಅಮಿತ್ ಶಾ ನೀಡಲಿರುವ ಪಟ್ಟಿಯಂತೆ ಕೇವಲ ೧೩ ರಿಂದ ೧೫ ಜನರಿಗಷ್ಟೇ ಸಚಿವ ಸ್ಥಾನದ ಅವಕಾಶ ಸಿಗಲಿದೆ. ಅನೇಕರಿಗೆ ಈ ಅವಕಾಶ ತಪ್ಪಲಿದ್ದು, ಆಕಾಂಕ್ಷಿಗಳೆಲ್ಲಾ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಹಿನ್ನಲೆಯಲ್ಲಿ ಇಂದು ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಭೇಟಿ ನೀಡಿದ್ದಾರೆ . ಶಾಸಕರಾದ ಬಸವರಾಜ ಬೊಮ್ಮಾಯಿ, ಸುನೀಲ್ ಕುಮಾರ್, ಉಮೇಶ್ ಕತ್ತಿ ಸೇರಿದಂತೆ ಹಲವು ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಅದಾಗಲೇ ಬಿಜೆಪಿ ಹೈಕಮಾಂಡ್ ಒಗ್ಗಟಿನ ಪಾಠ ಮಾಡುವಂತೆ ಯಡಿಯೂರಪ್ಪನವರಿಗೆ ಕಿವಿಮಾತು ಸಹ ಹೇಳಿದೆ, ಇದೀಗ ಇರುವ ಪಟ್ಟಿಯಂತೆ ಸ್ಥಾನ ಹಂಚಿಕೆಯಾದರೆ ಉಳಿದವರ ಸ್ಥಿತಿ ಏನು ? ಅವರನ್ನೆಲ್ಲಾ ಸಮಾಧಾನ ಪಡಿಸುವ ದೊಡ್ಡ ಜವಾಬ್ದಾರಿ ಯಡಿಯೂರಪ್ಪನವರ ಮುಂದಿದೆ.
ಈ ನಿಟ್ಟಿನಲ್ಲಿ ನಮಗೆಲ್ಲಿ ಅವಕಾಶ ತಪ್ಪುತ್ತದೆಯೋ ಎಂದು ಆತಂಕಕ್ಕೆ ಒಳಗಾದ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ./////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ