Kannada NewsKarnataka NewsLatest

ಯಕ್ಸಂಬಾ ಭೀರೇಶ್ವರ ಸೊಸೈಟಿಗೆ 25.38 ಕೋಟಿ ರೂ. ಲಾಭ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ- ಜಾಗತಿಕ ಕೊರೋನಾ ಸೋಂಕಿನಿಂದಾಗಿ ಕಳೆದ ಬಾರಿ ಭೀರೇಶ್ವರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಆರ್ಥಿಕ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, ಆದರೆ ಈ ಸಾಲಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಪ್ರಸಕ್ತ ಸಾಲಿನ ಭೀರೇಶ್ವರ ಸೊಸೈಟಿಯ ಒಟ್ಟು ಲಾಭ 25,38,60,575.75 ಕಂಡಿದೆ ಎಂದು ಬೀರೇಶ್ವರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
 ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಭೀರೇಶ್ವರ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶನಿವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದವರು ಬೀರೇಶ್ವರ ಸಂಸ್ಥೆಯು ಸಾಮಾನ್ಯ ಜನರಿಗೆ ಕೈಗೆಟುಕುವ ಪರಿಕಲ್ಪನೆ ಹೊಂದಿದೆ. ಈಗಿನ ಕಾಲಘಟ್ಟದಲ್ಲಿ ಆರ್ಥಿಕ ಪ್ರಗತಿಯೋಂದಿಗೆ ದಿಟ್ಟ ಹೆಜ್ಜೆಯನ್ನು ಹಾಕುತ್ತಿದೆ. ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಆಡಳಿತ ವೈಖರಿ ಕಾರಣವಾಗಿದೆ ಎಂದರು.
 ಭೀರೇಶ್ವರ ಸಂಸ್ಥೆಯು ಮಹಾರಾಷ್ಟ್ರ ಸೇರಿ ಕರ್ನಾಟಕದಲ್ಲಿ ಒಟ್ಟು 153 ಶಾಖೆಗಳನ್ನು ಹೊಂದಿದ್ದು 8 ಕಡೆಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ. ವಾರ್ಷಿಕವಾಗಿ ಸ್ವಂತ ಕಟ್ಟಡದ ಕಾಮಗಾರಿ 19 ಯೋಜನೆ ಚಾಲ್ತಿಯಲ್ಲಿದೆ. 3,10,008 ಸದಸ್ಯ ಮಂಡಳಿಯನ್ನು ಹೊಂದಿದ್ದು, ಶೇಕಡ 7.91 ರಷ್ಟು ಬೆಳವಣಿಗೆ ಕಂಡಿದೆ, 27,17,31,600.00 ಶೇರ್  ಕ್ಯಾಪಿಟಲ್ ಹೊಂದಿದೆ.109,12,65,765.30 ಕಾಯ್ದಿಟ್ಟ ಮತ್ತು ಇತರೇ ಮೊತ್ತ ಇದ್ದು,ಬ್ಯಾಂಕ್  ಠೇವು ಮತ್ತು ಗುಂತಾವಣೆಗಳು 771,64,70,788.73 ರಷ್ಟು ಇದ್ದು, 29, 60,12,74,762.84 ರಷ್ಟು ದುಡಿಯುವ ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದರು.
 2804 ಕೋಟಿ 52 ಲಕ್ಷ ರೂ. ಠೇವು ಸಂಗ್ರಹಿಸಿದ್ದು ,  2051 ಕೋಟಿ 63 ಲಕ್ಷ ರೂ ಸಾಲ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ‌ ಗಡದೇ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಅಧ್ಯಕ್ಷರಾದ ಜ್ಯೋತಿ ಪ್ರಸಾದ್ ಜೊಲ್ಲೆ ಸೇರಿ ಬ್ಯಾಂಕ್ ನಿರ್ದೇಶಕ ಮಂಡಳಿ, ಸದಸ್ಯರು, ಆಡಳಿತ ಸಿಬ್ಬಂದಿ ಇದ್ದರು. ಪ್ರಧಾನ ಶಾಖಾಧಿಕಾರಿ ಆರ್ ಸಿ ಚೌಗಲಾ ಸ್ವಾಗತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button