ಸೈಬರ್ ಕಳ್ಳರಿಂದ ಶೇ.94.99ರಷ್ಟು ಹಣ ವಸೂಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದುಕೊಂಡ ಹಣ ಹೋಯಿತು ಎನ್ನುವ ಇಂದಿನ ಪರಿಸ್ಥಿತಿಯಲ್ಲಿ ಬೆಳಗಾವಿ ಸಿಇಎನ್ ಪೊಲೀಸರು ಸೈಬರ್ ಕಳ್ಳರು ಸುಲಿಗೆ ಮಾಡಿದ್ದ ಶೇ.94.99ರಷ್ಟು ಹಣವನ್ನು ಮರಳಿ ವಸೂಲಿ ಮಾಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.
ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೆ ಒಟ್ಟು 1309 ಪ್ರಕರಣಗಳಲ್ಲಿ(ಅರ್ಜಿಗಳು ಸೇರಿದಂತೆ) ಸೈಬರ್ ಹಣಕಾಸು ವಂಚನೆಗಳಲ್ಲಿ (CYBER FINANCIAL FRAUD) ದೂರುದಾರರು ಕಳೆದುಕೊಂಡಿದ್ದು ರೂಪಾಯಿ 2,45,37,052.
ತನಿಖೆ ಕೈಗೊಂಡು ಸೈಬರ್ ವಂಚಕರ ಸುಮಾರು 1825 ಬ್ಯಾಂಕ್ ಖಾತೆ ಹಾಗೂ ವ್ಯಾಲೆಟ್ಗಳಲ್ಲಿದ್ದ ಒಟ್ಟು ರೂಪಾಯಿ 2,33,09,350 ಹಣವನ್ನು ಬೆಳಗಾವಿ ಪೊಲೀಸರು ಪ್ರೀಜ್ ಮಾಡಿದ್ದಾರೆ. ಸಂಬಂಧಪಟ್ಟ ದೂರುದಾರರ ಖಾತೆಗೆ 88,10,347 ರೂಪಾಯಿ ಹಣವನ್ನು ಮರಳಿ ಸಂದಾಯ ಮಾಡಲಾಗಿದ್ದು, ಇನ್ನುಳಿದ 1,44,99,003 ರೂಪಾಯಿ ಮೊತ್ತವನ್ನು ಸಹ ದೂರುದಾರರಿಗೆ ಮರು ಸಂದಾಯ ಮಾಡಲು ಕ್ರಮ ವಹಿಸಲಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೈಬರ್ ಕ್ರೈಂ ಬೇಧಿಸಲು ಯಶಸ್ವಿಯಾಗಿರುವುದು ಅಪರೂಪ. ಬಿ.ಆರ್.ಗಡ್ಡೇಕರ್ ಮತ್ತವರ ತಂಡ ಈ ಸಾಧನೆ ಮಾಡಿದೆ.
ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾದಲ್ಲಿ ತಮ್ಮ ಬ್ಯಾಂಕ ಖಾತೆಯ ವಿವರ ಮತ್ತು ವೈಯಕ್ತಿಕ ವಿವರಗಳೊಂದಿಗೆ ತತಕ್ಷಣ “GOLDEN HOUR” ದಲ್ಲಿ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಸಂಪರ್ಕಿಸಿ ಮಾಹಿತಿ ನೀಡಲು ಉಪ ಪೊಲೀಸ್ ಆಯುಕ್ತರ (ಕಾನೂನು ಮತ್ತು ಸುವ್ಯವಸ್ಥೆ ) ಡಾ.ವಿಕ್ರಂ ಅಮಟೆ ಕೋರಿದ್ದಾರೆ.
ಕೂಡಲೇ ಸೈಬರ್ ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗದೇ ಇದ್ದಲ್ಲಿ 112 ಗೆ ಇಲ್ಲವೇ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಫೋನ್ ನಂಬರ 0831-2950320 ನೇದ್ದಕ್ಕೆ ಸಂಪರ್ಕಿಸಲು ಸೂಚಿಸಿದೆ. ಹಾಗೂ ಸಂಬಂಧಪಟ್ಟ ಬ್ಯಾಂಕ್ ಶಾಖೆಗೂ ಮಾಹಿತಿ ನೀಡಲು ಕೋರಲಾಗಿದೆ.
ಸೈಬರ್ ಹಣಕಾಸು ವಂಚನೆ (CYBER FINANCIAL FRAUD) ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಯಾಂಕ್ ಗಳ ಸಭೆಯನ್ನು ನಡೆಸಿ ಅವರ ಸಹಕಾರ ಕೋರಲಾಗಿದೆ.
ಈ ಅಕ್ಟೋಬರ್ ಮಾಹೆಯನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಅವೇರನಸ್ ಮಂಥ್’ ಎಂದು ಆಚರಿಸಲಾಗುತ್ತಿದ್ದು, ಈ ಸಂಬಂಧ ಸೊಶಿಯಲ್ ಮಿಡಿಯಾ, ಮಾಸ್ ಮಿಡಿಯಾ ಹಾಗೂ ಶಾಲಾ ಕಾಲೇಜುಗಳ ಮುಖಾಂತರ ಹಾಗೂ ಸೈಬರ್ ವಂಚನೆಗೆ ಒಳಗಾಗಿ ಮರಳಿ ಹಣ ಸಂದಾಯವಾದವರ ಮುಖಾಂತರ “ಸೈಬರ್ ಸೆಕ್ಯೂರಿಟಿ ಅವೆರನಸ್’ ಹಮ್ಮಿಕೊಳ್ಳಲಾಗಿದೆ.
ಬುಧವಾರ ವಿಕ್ರಂ ಅಮಟೆ, ಗಡ್ಡೇಕರ್ ಮತ್ತು ತಂಡದವರು ಸಾಂಕೇತಿಕವಾಗಿ ಸೈಬರ್ ಹಣಕಾಸಿನ ವಂಚನೆಗೆ (CYBER FINANCIAL FRAUD) ಒಳಗಾದ ನೊಂದವರನ್ನು ಕರೆಯಿಸಿ ಅವರು ಕಳೆದುಕೊಂಡ ಹಣ ಸಂದಾಯ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ