
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಫೆಬ್ರವರಿ 9ರಿಂದ ಇಲ್ಲಿನ ಹನುಮಾನ ನಗರದ ಹಿಂದವಾಡಿ ಗುಮ್ಮಟಮಾಳ ಮಾರುತಿ ಮಂದಿರದಿಂದ ನಾಪತ್ತೆಯಾಗಿದ್ದ ಪ್ರಜ್ವಲ್ ಬಸವರಾಜ ಮಹಾಂತಶೆಟ್ಟಿ(೨೪) ಎಂಬ ಯುವಕನ ಶವ ಪತ್ತೆಯಾಗಿದೆ.
ಬೆಳಗಾವಿಯ ವಿನಯಾ ಕಾಲೇಜd ಆಫ್ ಪಾರ್ಮಸಿಯಲ್ಲಿ ೧ನೇ ವರ್ಷದ ಡಿ ಪಾರ್ಮಸಿಯಲ್ಲಿ ಓದುತ್ತಿದ್ದ ಯುವಕ ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮನೋವೈದ್ಯರಿಂದ ಉಪಚಾರ ಮಾಡಿಸಲಾಗುತ್ತಿತ್ತು. ಆದರೆ ಫೆಬ್ರವರಿ ೯ ರಂದು ಮನೆಯಲ್ಲಿ ತನ್ನ ತಾಯಿಗೆ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದೆ ಕಾಣೆಯಾಗಿದ್ದ.
ಈ ಕುರಿತು ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಯುವಕನ ಶವ ಬಳ್ಳಾರಿ ನಾಲೆಯಲ್ಲಿ ಪತ್ತೆಯಾಗಿದ್ದು, 2 -3 ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ