*ಕೇಜ್ರಿವಾಲ್ ಸೋಲಿಸಿದ ಅಭ್ಯರ್ಥಿಯೇ ದೆಹಲಿ ಮುಂದಿನ ಸಿಎಂ?*
![](https://pragativahini.com/wp-content/uploads/2025/02/parvesh-sharma.jpg)
ಪ್ರಗತಿವಾಹಿನಿ ಸುದ್ದಿ : 27 ವರ್ಷಗಳ ನಂತರದಲ್ಲಿ ಬಿಜೆಪಿಯು ದಿಲ್ಲಿ ಆಡಳಿತ ತನ್ನ ತೆಕ್ಕೆಗೆ ತೆಗೆದುಕೊಂಡು ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದು, ಸಿಎಂ ಕುರ್ಚಿಗಾಗಿ ತೀರ್ವ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಸಿಎಂ ಹೆಸರು ರಿವಿಲ್ ಆಗಿದೆ.
ಬಿಜೆಪಿಯು ಇದೀಗ ದಿಲ್ಲಿ ಸಿಎಂ ಆಯ್ಕೆಯನ್ನೂ ಅಂತಿಗೊಳಿಸಿದೆ ಎನ್ನಲಾಗಿದೆ. ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೆ ಸಿಎಂ ಎಂದು ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ಅರವಿಂದ ಕೇಜ್ರವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಗೆದ್ದು ಕೇಜಿವಾಲ್ ಅವರಿಗೆ 4,089 ಮತಗಳ ಅಂತರದಿಂದ ಸೋಲಿನ ರುಚಿ ತೋರಿಸಿದ್ದ ಪರ್ವೇಶ್ ವರ್ಮಾ ಅವರನ್ನು ಸಿಎಂ ಮಾಡಲು ಹೈಕಮಾಂಡ್ ನಾಯಕರು ಮತ್ತು ಆರ್‌ಎಸ್‌ಎಸ್ ಪ್ರಮುಖರು ಒಪ್ಪಿಗೆ ಸೂಚಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಫೆ.8ರಿಂದ ಈವರೆಗೆ ಕೇಂದ್ರ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರು ಆರಂಭಿಕದಲ್ಲಿ ಸಿಎಂ ಆಯ್ಕೆ ಕುರಿತು ಒಂದು ಸುತ್ತಿನ ಸಭೆ ಮಾಡಿದ್ದರು. ನಂತರ ಸರಣಿ ಸಭೆ, ಹಿರಿಯರ ಅಭಿಮತ ಪಡೆದು ಒಮ್ಮತಕ್ಕೆ ಬರಲಾಗಿದೆ. ಸದ್ಯ ವರ್ಮಾ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ