Karnataka NewsLatest

*ಯಕೃತ್ತು ದಾನ ಮಾಡಿ ಬೇರೊಬ್ಬರ ಜೀವ ಉಳಿಸಲು ಹೋಗಿ ತಾನೇ ಸಾವನ್ನಪ್ಪಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಸಂಬಂಧಿಕರ ಮಹಿಳೆಯೊಬ್ಬರಿಗೆ ತನ್ನ ಯಕೃತ್ತು ದಾನ ಮಾಡಲು ಹೋಗಿ ಮಹಿಳೆಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ಈ ದುರಂತ ಸಂಭವಿಸಿದೆ. ಅರ್ಚನಾ ಕಾಮತ್ (34) ಮೃತ ಮಹಿಳೆ. 69 ವರ್ಷದ ಹಿರಿಯ ಸಂಬ್ಂಧಿಕ ಮಹಿಳೆಗೆ ಯಕೃತ್ತಿನ (liver) ಕಸಿಗೆ ದಾನಿಯಾಗಲು ಅರ್ಚನಾ ಬಯಸಿದ್ದರು. ಯಕೃತ್ತು ದಾನದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಅರ್ಚನಾ ದಾಖಲಾಗಿದ್ದರು.

ಆಸ್ಪತೆಗೆ ದಾಖಲಾದ ಬಳಿಕ ಅರ್ಚನಾ ಯಕೃತ್ತು ಸೋಂಕಿನಿಂದಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅರ್ಚನಾ ಕಾಮತ್ ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಸದಾ ಸಮಾಜಮುಖಿ ಚಿಂತನೆಯಲ್ಲಿರುತ್ತಿದ್ದ ಅರ್ಚನಾ ಕಾಮತ್, ತನ್ನ ಪತಿಯ ಸಂಬಂಧಿಕರೊಬ್ಬರಿಗೆ ತನ್ನ ಯಕೃತ್ತಿನ ಒಂದು ಭಾಗ ದಾನ ಮಾಡಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ.

ಅರ್ಚನಾ ಕುಟುಂಬ, ಆತ್ಮೀಯರು, ಸಂಬಂಧಿಕರು ಶೋಕಸಾಗರದಲ್ಲಿ ಮುಳುಗಿದೆ. ಪತಿ ಚೇತನ್, ನಾಲ್ಕು ವರ್ಷದ ಮಗು, ತಂದೆ-ತಾಯಿಯನ್ನು ಅರ್ಚನಾ ಅಗಲಿದ್ದಾರೆ.

Home add -Advt

Related Articles

Back to top button