Kannada NewsLatest

ನಿಗಮ ಸ್ಥಾಪನೆಗಾಗಿ ಸರಕಾರಕ್ಕೆ ಅಭಿನಂದಿಸಿದ ಸಮುದಾಯಗಳು

ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: “ಕೊಟ್ಟ ಮಾತಿನಂತೆ ನಡೆದು  ಹಲವು ಸಮಾಜಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿದ ಸರಕಾರ   ಬಿಜೆಪಿ ಸರಕಾರ ಶೋಷಿತ, ಹಿಂದುಳಿದ ಸಮುದಾಯಗಳ ಜತೆ ಇದ್ದು ಈ ಸಮುದಾಯಗಳೂ ಬಿಜೆಪಿ  ಜತೆಗಿರಬೇಕು ಎಂದು ವಿಜಯಪುರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.
ಅವರು ಮಾಳಿ/ಮಾಲಗಾರ, ಗಾಣಿಗ, ಹಡಪದ ಹಾಗೂ ಹೂಗಾರ ಸಮಾಜಗಳಿಗೆ ನಿಗಮ ಸ್ಥಾಪನೆಗಳ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 ಇದೇ ವೇಳೆ ಶ್ರೀ ಮಾಧವಾನಂದ ಜ್ಞಾನ ಯೋಗಾಶ್ರಮದವರೆಗೆ ವಿವಿಧ ಶರಣರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಸಮುದಾಯದವರು ಸರಕಾರಕ್ಕೆ ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ಶ್ರೀ ಮಾಧವಾನಂದ ಆಶ್ರಮದಲ್ಲಿ ಅಭಿನಂದನಾ ಸಮಾರಂಭ ಜರುಗಿತು.  ಮಾಳಿ/ಮಾಲಗಾರ ಸಮಾಜದ ನಿಯೋಗ ಅಧ್ಯಕ್ಷ ಡಾ. ಸಿ.ಬಿ.ಕುಲಿಗೋಡ   ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ ಸ್ವೀಕರಿಸಿ ಸಭೆಯಲ್ಲಿ ಮಾತನಾಡಿದ  ಡಾ.ಸಿ.ಬಿ.ಕುಲಿಗೋಡ ನಿಗಮ ಘೋಷಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಜಲ ಸಂಪನ್ಮೂಲ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ,   ಕನ್ನಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕ ಪಿ.ರಾಜೀವ್, ರಾಜ್ಯ ಕೆಎಂಎಫ್ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತಿತರರನ್ನು ಅಭಿವಂದಿಸಿದರು.
  ಮತಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ ಉಮೇಶ ಕಾರಜೋಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಪುರಸಭೆಯ ಸದಸ್ಯರಾದ ರಮೇಶ ಯಡವನ್ನವರ, ಹಾಲಪ್ಪ ಶೇಗುಣಸಿ, ಚೇತನ ಯಡವಣ್ಣವರ, ಮಹಾಂತೇಶ ಎರಡೆತ್ತಿ, ರಾಜುಗೌಡ ನಾಯಿಕ, ಪರಶುರಾಮ ಕಡಕೋಳ ಇತರರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಗೋಪಾಲ ಯಡವನ್ನವರ, ಕೃಷ್ಣರಾವ ನಾಯಿಕ, ಶ್ರೀಶೈಲ ಗೋಕಾಕ, ಸಿದ್ದರಾಮ ನಾವಿ, ಶಿವಾನಂದ ಮೆಕ್ಕಳಕಿ, ಮಹಾದೇವ ಸಂಗಾನಟ್ಟಿ, ಸಚಿನ್ ಪ್ರಧಾನಿ, ಪರಪ್ಪ ಮುಗಳಖೋಡ, ಪರಪ್ಪ ಮುಗಳಖೋಡ, ಹನುಮಂತ ಕುಲಗೋಡ, ಮಲ್ಲಪ್ಪ ಯಡವನ್ನವರ, ಮಹಾದೇವ ತೇಲಿ, ಶಿವಪ್ಪ ಹಳ್ಳೂರ, ಲಕ್ಷ್ಮಣ ನಾವಿ, ಸಂಗಪ್ಪ ತೇಲಿ, ಗಂಗಪ್ಪ ಗೋಕಾಕ, ಅಗ್ರಾಣಿ ಶೇಗುಣಸಿ, ರಾಮಕೃಷ್ಣ ಕಂಬಾರ, ನಿಜುಗುಣಿ ಯಡವನ್ನವರ, ಕುಮಾರ ಶೇಡಿಶಾಳ, ಯಲ್ಲಾಲಿಂಗ ಮುಧೋಳ, ಶಿವಾನಂದ ವಿಜಯನಗರ, ರಾಜು ಮುಧೋಳ, ಶ್ರೀಶೈಲ ಮುಧೋಳ, ಲಕ್ಷ್ಮಣ ಗೋಕಾಕ, ಲಕ್ಷ್ಮಣ ನಾವಿ, ಶಿವಪುತ್ರ ನಾವಿ, ಅಣ್ಣಪ್ಪ ನಾವಿ, ಸಂಗಪ್ಪ ತೇಲಿ,  ಭೀಮಪ್ಪ ತೇಲಿ, ಮಹಾದೇವ ತೇಲಿ, ಧರೆಪ್ಪ ತೇಲಿ, ಬಸಪ್ಪ ತೇಲಿ ಉಪಸ್ಥಿತರಿದ್ದರು.
  ಶಿಕ್ಷಕ ಬಸವರಾಜ್ ಯಡವಣ್ಣವರ್  ನಿರೂಪಿಸಿ, ವಂದಿದಿಸಿದರು.

 

ವಿದ್ಯಾರ್ಥಿನಿ ಮೊಬೈಲ್ ಗೆ ಕಿಡಿಗೇಡಿ ಮೆಸೇಜ್; ಶಿಕ್ಷಕ ಅಮಾನತು

https://pragati.taskdun.com/mischievous-message-to-a-students-mobile-phone-teacher-suspended/

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ ಜೀವ ಬೆದರಿಕೆ, ಪೋಲಿಸ್ ರಿಗೆ ಪತ್ರ ಬರೆದ ಸಂಜಯ್ ರಾವುತ್

https://pragati.taskdun.com/chief-minister-eknath-shindes-son-threatened-his-life-sanjay-raut-wrote-a-letter-to-the-police/

ಟರ್ಕಿಯಲ್ಲಿ ಭಾರತೀಯ ಸೇನಾ ಕಾರ್ಯಕ್ಕೆ ಭರಪೂರ ಪ್ರಶಂಸೆ

https://pragati.taskdun.com/indian-armys-performance-in-turkey-is-much-appreciated/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button