Kannada NewsKarnataka NewsLatest

ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ನಿರ್ನಾಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಪೂರ್ಣ ನಿರ್ನಾಮವಾಗಿದೆ.

ಈವರೆಗೆ ಭಾಷೆಯ ಆಧಾರದ ಮೇಲೆ ಆಟವಾಡುತ್ತಿದ್ದ ಎಂಇಎಸ್ ಬಣ್ಣ ಈಗ ಬಯಲಾಗಿದೆ. ಎಂಇಎಸ್ ಬೇರು ಸಂಪೂರ್ಣ ನಾಶವಾಗಿದೆ ಎನ್ನುವುದು ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದಿಂದ ಬಯಲಾಗಿದೆ.

ಬೆಳಗಾವಿ ಪಾಲಿಕೆ ಗದ್ದುಗೆ ಏರಲು ಬಿಜೆಪಿ ಸಿದ್ಧವಾಗಿದೆ. ಶಾಸಕರು, ಸಂಸದರ ಮತಗಳೊಂದಿಗೆ ಬಿಜೆಪಿ ಬಹುಮತ ಸಾಧಿಸುವ ಲಕ್ಷಣ ಕಾಣಿಸುತ್ತಿದೆ.

ಪ್ರಕಟವಾಗಿರುವ 44 ವಾರ್ಡ್ ಗಳ ಫಲಿತಾಂಶದಲ್ಲಿ ಬಿಜೆಪಿ 30ರಲ್ಲಿ, ಕಾಂಗ್ರೆಸ್ 7 ರಲ್ಲಿ ಪಕ್ಷೇತರರು 6ರಲ್ಲಿ ಹಾಗೂ ಎಐಎಂಐಎಂ 1ರಲ್ಲಿ ಗೆಲುವು ಸಾಧಿಸಿದೆ.

ಬೆಳಗಾವಿಯಲ್ಲಿ 24 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button