Latest

ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ ಇಂದು ಬೊಮ್ಮಾಯಿ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತ ಪಾಟೀಲ ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲಿದ್ದಾರೆ.

ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಈ ಭೇಟಿ ನಡೆಯಲಿದ್ದು, ಇದೊಂದು ಸೌಜನ್ಯದ ಭೇಟಿ ಎಂದು ತಿಳಿಸಲಾಗಿದೆ.

ಆದರೆ, ಕರ್ನಾಟಕ – ಮಹಾರಾಷ್ಟ್ರ ಮಧ್ಯೆ ನೀರಾವರಿಗೆ ಸಂಬಂಧಿಸಿದಂತೆ ಹಲವಾರು ವಿವಾದಗಳಿವೆ. ಮಹಾರಾಷ್ಟ್ರ ಮಳೆಗಾಲದಲ್ಲಿ ಹೆಚ್ಚಾದ ನೀರನ್ನು ಏಕಾಏಕಿ ಕರ್ನಾಟಕಕ್ಕೆ ಬಿಡುವ ಮೂಲಕ ಕರ್ನಾಟಕದ ಉತ್ತರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಗುತ್ತಿದೆ. ಈ ಕುರಿತು ಸರಿಯಾದ ಮಾಹಿತಿಯನ್ನು ನೀಡುವ ಸೌಜನ್ಯವನ್ನೂ ಮಹಾರಾಷ್ಟ್ರ ತೋರಿಸುವುದಿಲ್ಲ.

ಆದರೆ, ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಮಹಾರಾಷ್ಟ್ರ ಸರಿಯಾಗಿ ಸ್ಪಂದಿಸದೆ ತೀವ್ರವಾಗಿ ಕಾಡಿಸುತ್ತದೆ. ಅಲ್ಲದೆ ಇನ್ನೂ ಕೆಲವು ವಿಷಯಗಳು ಉಭಯ ರಾಜ್ಯಗಳ ಮಧ್ಯೆ ಇತ್ಯರ್ಥಕ್ಕಾಗಿ ಕಾದಿವೆ.

Home add -Advt

ಕರ್ನಾಟಕದ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಈ ಎಲ್ಲ ವಿಷಯಗಳನ್ನು ಸಂಪೂರ್ಣವಾಗಿ ತಿಳಿದಿದ್ದಾರೆ. ಹಾಗಾಗಿ ಮಹಾರಾಷ್ಟ್ರ ನೀರಾವರಿ ಸಚಿವರು ಇಂದು ಬಂದ ಸಂದರ್ಭದಲ್ಲಿ ಈ ವಿಷಯಗಳ ಕುರಿತು ಮಾತನಾಡಿ, ಕರ್ನಾಟಕದೊಂದಿಗೆ ಸಹಕರಿಸಲು ಸೂಚಿಸಬೇಕಿದೆ.

 

ತೊಡೆ ಜೋಡಿಸಿ ಲೈಂಗಿಕ ಕ್ರಿಯೆ ನಡೆಸಿದರೂ ಅತ್ಯಾಚಾರ – ಕೇರಳ ಹೈಕೋರ್ಟ್ ತೀರ್ಪು

Related Articles

Back to top button