Latest

ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದೆ, ಈಗ ಏನನ್ನೂ ಕೇಳುವ ಪ್ರಶ್ನೆ ಇಲ್ಲ ಎಂದ ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರು, ಸಿಎಲ್ ಪಿ ನಾಯಕರು. ನಾವು ಸಿದ್ದರಾಮಯ್ಯನವರ ಕೆಳಗೆ ಶಾಸಕರಾಗಿ ಕೆಲಸ ಮಾಡುವವರು. ಹಾಗಾಗಿ ಅವರನ್ನು ಭೇಟಿಯಾಗಲು ಬಂದಿದ್ದೆ, ಇದರಲ್ಲಿ ವಿಶೇಷತೆಯಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಯಾವ ಸ್ಥಾನಕ್ಕೂ ಬೇಡಿಕೆ ಇಟ್ಟಿಲ್ಲ. ಕಾಂಗ್ರೆಸ್ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗ ಏನನ್ನೂ ಕೇಳುವ ಪ್ರಶ್ನೆ ಇಲ್ಲ, ಕೇಳುವ ಕಾಲವೆಲ್ಲ ಮುಗಿದಿದೆ.  ನಾನು ಕಾಂಗ್ರೆಸ್ ಕಾರ್ಯಕರ್ತ. ಪಕ್ಷಕ್ಕಾಗಿ ದುಡಿಯುತ್ತೇನೆ.  ಅಧಿಕಾರವಿರಲಿ, ಇಲ್ಲದಿರಲಿ ಸಿದ್ದರಾಮಯ್ಯ ನಮ್ಮ ನಾಯಕ. ಹೈಕಮಾಂಡ್, ಪಕ್ಷದ ಅಧ್ಯಕ್ಷರು ಹೇಳುವುದು ಫೈನಲ್ ಎಂದರು.

ಭೇಟಿ ವೇಳೆ ಪ್ರಸಕ್ತ ರಾಜಕೀಯದ ಕುರಿತು ಚರ್ಚೆ ನಡೆಸಿದ್ದೇವೆ. ನಮ್ಮನ್ನು ನಂಬಿದ ಹಲವರು ಇದ್ದಾರೆ. ರಾಜ್ಯ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಿರಿಯರಾಗಿ ಚರ್ಚಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ ಅಷ್ಟೇ ಎಂದು ಹೇಳಿದರು.

Home add -Advt

Related Articles

Back to top button