ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆಗೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಜೈನರು ನೀಡಿದ ಕೊಡುಗೆ ಅಪಾರ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಮುತಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭಗವಾನ ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ ಮಂದಿರದ ನೂತನ ಸಮುದಾಯ ಭವನದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
” ನಾನು ಗ್ರಾಮೀಣ ಭಾಗದ ಶಾಸಕಿಯಾಗಿ ಹೊರಹೊಮ್ಮಿರುವುದು ಯಾವ ಜನ್ಮದ ಪುಣ್ಯವೋ ಎಂಬುದು ತಿಳಿಯುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಆಕಾಶಕ್ಕಿಂತಲೂ ಅಗಾಧವಾಗಿದೆ. ಮನೆಯ ಮಗಳಂತೆ ನೋಡಿಕೊಳ್ಳುತ್ತಿದ್ದೀರಿ. ಎಲ್ಲ ಅಭಿವೃದ್ಧಿಯ ಕೆಲಸಗಳಿಗೆ ಜನತೆ ನೀಡಿದ ಸಹಕಾರ ಅವಿಸ್ಮರಣೀಯ. ಈ ಪ್ರೀತಿ, ಪ್ರೋತ್ಸಾಹ, ಸಹಕಾರ ಹೀಗೆಯೇ ಮುಂದುವರೆಯಲಿ” ಎಂದರು.
“ಬರುವ ದಿನಗಳಲ್ಲಿ ಕ್ಷೇತ್ರದ ಜನತೆಯ ಮನೆ ಮಗಳಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳೊಂದಿಗೆ ಸದಾಕಾಲ ಜನರೊಂದಿಗೆ ಇರುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಸ್ವಸ್ತಿ ಶ್ರೀ ಸುಮತಿಸಾಗರ ಮಹಾರಾಜರು, ಕಿರಣ ಪಾಟೀಲ, ರುಕ್ಮಿಣಿ ಸಿಂಗಾರಿ, ನಾಗೇಶ ದೇಸಾಯಿ, ಸುರೇಂದ್ರ ಬಸ್ತವಾಡ, ಶ್ಯಾಮ್ ಮುತಗೇಕರ್, ಸ್ನೇಹಲ್ ಪೂಜಾರಿ, ಸುನೀಲ ಪಾಟೀಲ, ಪಾರಿಶ್ ಪಾರಿಶ್ವಾಡ್, ಎಲ್ಲ ಜೈನ ಸಮುದಾಯದ ಮುಖಂಡರು, ಪ್ರಭಾಕರ ಬೆಳಗಾಂವ್ಕರ ಮುಂತಾದವರು ಉಪಸ್ಥಿತರಿದ್ದರು.
ಫೆ.27ರಂದು ಹಲವೆಡೆ ವಿದ್ಯುತ್ ವ್ಯತ್ಯಯ
https://pragati.taskdun.com/power-failure-in-many-places-on-february-27/
*7ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಸಿಎಂ ಮಹತ್ವದ ಸಂದೇಶ*
https://pragati.taskdun.com/7th-pay-commissionopsstate-govt-employeescm-basavaraj-bommai/
*ಪುಟ್ಟ ಬಾಲಕನ ಮೇಲೆ ಬೀದಿನಾಯಿಗಳ ದಾಳಿ; ಕಚ್ಚಿ ಎಳೆದಾಡಿ ಮಗುವನ್ನು ಕೊಂದ ನಾಯಿಗಳು*
https://pragati.taskdun.com/street-dogattackboydeath/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ