ಕೆಲವೇ ಗಂಟೆಗಳಲ್ಲಿ ಪರಿಷತ್ ಫಲಿತಾಂಶ; ರಾಜ್ಯದಲ್ಲಿ 25 ಸ್ಥಾನಗಳಲ್ಲಿ ಮತ ಎಣಿಕೆ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿಸೆಂಬರ್ 10ರಂದು ನಡೆದಿರುವ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆ ಮತಗಳ ಎಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.
ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ನೇರವಾಗಿ ಈ ಚುನಾವಣೆ ಪರಿಣಾಮ ಬೀರದಿದ್ದರೂ ರಾಜ್ಯದ ರಾಜಕೀಯ ದಿಕ್ಕು ಬದಲಾವಣೆಗೆ ಕಾರಣವಾಗುವುದಂತೂ ನಿಶ್ಚಿತ. ರಾಜಕೀಯ ಧೃವೀಕರಣಕ್ಕೆ ಈಗಿನಿಂದಲೇ ಚಾಲನೆ ಸಿಕ್ಕಿದರೂ ಆಶ್ಚರ್ಯವಿಲ್ಲ.
ಬೆಳಗಾವಿಯ ದ್ವಿ ಸದಸ್ಯ ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದೆ. ಇಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಜಿಲ್ಲೆಯಷ್ಟೆ ಅಲ್ಲ, ರಾಜ್ಯ ರಾಜಕೀಯಕ್ಕೂ ಬೆಳಗಾವಿಯ ಫಲಿತಾಂಶ ಮಹತ್ವದ್ದಾಗಿದೆ. ಅದರಲ್ಲೂ ಮುಖ್ಯಮಂತ್ರಿ ಸೇರಿದಂತೆ (ವಾರಣಾಸಿಯಿಂದ ಸಂಜೆ ವಾಪಸ್ಸಾಗಲಿದ್ದಾರೆ) ಇಡೀ ಸರಕಾರ, ಶಾಸಕರು ಎಲ್ಲರೂ ಸಧ್ಯ ಬೆಳಗಾವಿಯಲ್ಲಿ ಇರುವುದರಿಂದ ಇನ್ನಷ್ಟು ಆಸಕ್ತಿ ಕೆರಳಿಸಿದೆ.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಫಲಿತಾಂಶದ ದಿಕ್ಕು ಕಾಣಲು ಆರಂಭವಾಗಲಿದೆ.
ಬೆಳಗಾವಿ ಅಧಿವೇಶನದ ಮೊದಲ ದಿನದ ಸಮಗ್ರ ಸುದ್ದಿ, ವಿಡೀಯೋ ಇಲ್ಲಿದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ