Latest

ಮಾರ್ಚ್ ನಲ್ಲಿ ಸಿದ್ಧಗೊಳ್ಳಲಿವೆ ದೇಶದ ಮೊದಲ 22 ಸ್ಮಾರ್ಟ್ ಸಿಟಿಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮೊದಲ 22 ನಗರಗಳು ಬರುವ ಮಾರ್ಚ್ ತಿಂಗಳೊಳಗೆ ಸಿದ್ಧಗೊಳ್ಳಲಿವೆ.

ಆಗ್ರಾ, ಚೆನ್ನೈ, ಪುಣೆ, ವಾರಣಾಸಿ  ಭೋಪಾಲ್, ಇಂದೋರ್, ಆಗ್ರಾ, ವಾರಣಾಸಿ, ಭುವನೇಶ್ವರ್, ಚೆನ್ನೈ, ಕೊಯಮತ್ತೂರು, ಈರೋಡ್, ರಾಂಚಿ, ಸೇಲಂ, ಸೂರತ್, ಉದಯಪುರ, ವಿಶಾಖಪಟ್ಟಣಂ, ಅಹಮದಾಬಾದ್, ಕಾಕಿನಾಡ, ಪುಣೆ, ವೆಲ್ಲೂರ್, ಪಿಂಪ್ರಿ-ಚಿಂಚ್‌ವಾಡ್, ಮಧುರೈ, ಅಮರಾವತಿ, ತಿರುಚಿರಾಪಳ್ಳಿ ಮತ್ತು ತಂಜಾವೂರು. ನಗರಗಳಲ್ಲಿ ಯೋಜನೆ ಕಾಮಗಾರಿಗಳು ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಮೂಲಕ 22 ನಗರಗಳು ಸಂಪೂರ್ಣ ಸ್ಮಾರ್ಟ್ ಸಿಟಿಗಳಾಗಲಿವೆ.

ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಉಳಿದ ನಗರಗಳ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟೀಸ್ ಮಿಷನ್ ಮಾರ್ಗಸೂಚಿಗಳ ಪ್ರಕಾರ, ಕೇಂದ್ರ ಸರಕಾರ 5 ವರ್ಷಗಳಲ್ಲಿ 48 ಸಾವಿರ ಕೋಟಿ ರೂ. ಆರ್ಥಿಕ ಬೆಂಬಲ ನಿಗದಿಪಡಿಸಿದೆ. ಪ್ರತಿ ವರ್ಷ  ಸರಾಸರಿ 100 ಕೋಟಿ ರೂ., ಏತನ್ಮಧ್ಯೆ, ಹೊಂದಾಣಿಕೆಯ ಆಧಾರದ ಮೇಲೆ ಸಮಾನ ಮೊತ್ತವನ್ನು ರಾಜ್ಯ ಸರಕಾರ ಅಥವಾ ನಗರ ಸ್ಥಳೀಯ ಸಂಸ್ಥೆ  ನೀಡುತ್ತದೆ.

ಮಿಷನ್ ಅಡಿಯಲ್ಲಿ ದೇಶದ ಒಟ್ಟು 100 ನಗರಗಳನ್ನು ಆಯ್ಕೆ ಮಾಡಲಾಗಿದ್ದು ಸರಕಾರದ ಪ್ರಕಾರ, ಉಳಿದ 78 ನಗರಗಳಲ್ಲಿನ ಯೋಜನೆಗಳು ಮುಂದಿನ 3-4 ತಿಂಗಳಲ್ಲಿ  ಮುಕ್ತಾಯಗೊಳ್ಳಲಿವೆ.

ಕರ್ನಾಟಕ ರಾಜ್ಯದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು, ತುಮಕೂರು ಹಾಗೂ ಶಿವಮೊಗ್ಗ ಕೂಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿದ್ದು ಶೀಘ್ರವೇ ಇಲ್ಲೂ ಕಾಮಗಾರಿಗಳ ಮುಕ್ತಾಯದ ಆಶಯ ವ್ಯಕ್ತಪಡಿಸಲಾಗಿದೆ.

*ಹುಲಿ ದಾಳಿಗೆ ಇಬ್ಬರು ದುರ್ಮರಣ*

https://pragati.taskdun.com/tiger-attackkodagutwo-death/

ಹಳ್ಳಿಗೂ ಬಂತು ಐಟಿ ಕಂಪನಿ; ಒಡ್ಡಿನಕೊಪ್ಪದ ಅಡವಿಯಲ್ಲಿ ಹೈಟೆಕ್ ಸದ್ದು

https://pragati.taskdun.com/an-it-company-also-came-to-the-village-hi-tech-sound-in-the-forest-of-oddinakoppa/

*ಟಿಕೆಟ್ ಗಾಗಿ ಪೈಪೋಟಿ; ಭಿನ್ನಮತ; ಕಾಂಗ್ರೆಸ್ ಒಳ ಜಗಳಕ್ಕೆ ಪ್ರಜಾಧ್ವನಿ ಸಮಾವೇಶವೇ ರದ್ದು*

https://pragati.taskdun.com/kundagolaprajadwani-samaveshcanncelcongress/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button