Latest

*ಹುಲಿ ದಾಳಿಗೆ ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಹುಲಿ ದಾಳಿಗೆ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೆರೆ ಗ್ರಾಮದಲ್ಲಿ ನಡೆದಿದೆ.

ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಎರಡು ದಿನಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ ಕುಟ್ಟ ಗ್ರಾಮದಲ್ಲಿ ಹುಲಿ ದಾಳಿಯಿಂದ ಬಾಲಕ ಬಲಿಯಾಗಿದ್ದ. ಚೇತನ್ ಎಂಬ ಬಾಲಕನನ್ನು ಕೊಂದು ಭಾಗಶ: ತಿಂದಿದ್ದ ಹುಲಿ ಇಂದು ನಾಲ್ಕೆರೆ ಗ್ರಾದಲ್ಲಿ ದಾಳಿ ನಡೆಸಿದೆ.

Home add -Advt

ಪೂಣಚ್ಚ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ರಾಜು ಎಂಬುವವರ ಮೇಲೆ ಹುಲಿ ದಾಳಿ ನಡೆಸಿದ್ದು, ವ್ಯಕ್ತಿಯನ್ನು ತಿಂದು ಹಾಕಿದೆ.

ಕೊಡಗು ಜಿಲ್ಲೆಯಾದ್ಯಂತ ಹುಲಿ ದಾಳಿ ಭೀತಿ ಎದುರಾಗಿದ್ದು, ಕುಟ್ಟ, ನಾಲ್ಕೆರೆ ಗ್ರಾಮದ ಜನರು ಜೀವಭಯದಲ್ಲಿ ಬದುಕುವಂತಾಗಿದೆ.

*ಟಿಕೆಟ್ ಗಾಗಿ ಪೈಪೋಟಿ; ಭಿನ್ನಮತ; ಕಾಂಗ್ರೆಸ್ ಒಳ ಜಗಳಕ್ಕೆ ಪ್ರಜಾಧ್ವನಿ ಸಮಾವೇಶವೇ ರದ್ದು*

https://pragati.taskdun.com/kundagolaprajadwani-samaveshcanncelcongress/

Related Articles

Back to top button