Kannada NewsKarnataka News

ಮೂಗಿನ ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು

 ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಮೂಗಿನ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೂಗಿನಲ್ಲಿ ಮಾಂಸ ಬೆಳೆದಿದ್ದರಿಂದ ಶಸ್ತ್ರ ಚಿಕಿತ್ಸೆಗಾಗಿ ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ರಾಜಶ್ರೀ ಹದ್ದನ್ನವರ್ ಎನ್ನುವ 26 ವರ್ಷದ ಮಹಿಳೆ ದಾಖಲಾಗಿದ್ದಳು.

ಆದರೆ ಅರವಳಿಕೆ ನೀಡುವಲ್ಲಿ ಆದ ಎಡವಟ್ಟಿನಿಂದ ಮಹಿಳೆ ಮೃತಳಾಗಿದ್ದಾಳೆ. ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗಲೇ ರಾಜಶ್ರೀ ಸಾವಿಗೀಡಾಗಿದ್ದಾಳೆ. ಗೃಹಿಣಿ ಸಾವನ್ನಪ್ಪುತ್ತಿದ್ದಂತೆ ವೈದ್ಯರು ಓಡಿಹೋಗಿದ್ದಾರೆ.

Home add -Advt
 ರಾಜಶ್ರೀ ಬೈಲಹೊಂಗಲ ತಾಲೂಕಿನ ‌ತುರಮುರಿ ಗ್ರಾಮದ ಮಹಿಳೆ. ಮಹಿಳೆ ಸಾವಿನ ಸುದ್ದಿ ತಿಳಿದು ಸಂಬಂಧಿಕರು ಆಕ್ರೋಶಗೊಂಡಿದ್ದು, ಪ್ರತಿಭಟನೆಗಿಳಿದಿದ್ದಾರೆ. ಇದನ್ನು ಕಂಡ ವೈದ್ಯರು ಅಲ್ಲಿಂದ ಪರಾರಿಯಾಗಿದ್ದಾರೆ.
 ಬೈಲಹೊಂಗಲ ‌ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button