Karnataka NewsLatest

ರಾಜ್ಯದಲ್ಲಿ 24 ಜನರ ಸಾವು; 6 ಸಾವಿರ ಕೋಟಿ ರೂ. ಹಾನಿ

ರಾಜ್ಯದಲ್ಲಿ 24 ಜನರ ಸಾವು; 6 ಸಾವಿರ ಕೋಟಿ ರೂ. ಹಾನಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಲ್ಲಿ 1024 ಗ್ರಾಮಗಳು ಹಾನಿಗೊಳಗಾಗಿದ್ದು, 6 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದ 80 ತಾಲೂಕುಗಳು ಪ್ರವಾಹಪೀಡಿತವಾಗಿವೆ, 2,35000 ಜನರನ್ನು ಸ್ಥಳಾಂತರಿಸಲಾಗಿದೆ. 222 ಜಾನುವಾರು ಸಾವಿಗೀಡಾಗಿವೆ. 44 ಸಾವಿರ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. 624 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ, 1,57000 ಜನ ಆಶ್ರಯ ಪಡೆದಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಯಡಿಯೂರಪ್ಪ ರಾಜ್ಯದ ಮುಖ್ಯಕಾರ್ಯದರ್ಶಿ ಜೊತೆಗೆ 3 ದಿನ ರಾಜ್ಯದ ಪ್ರವಾಹ ಪೀಡಿತ ಉತ್ತತರ ಕರ್ನಾಟಕದ ಜಿಲ್ಲೆಗಳ ಪ್ರವಾಸ ನಡೆಸಿ ವಾಪಸ್ಸಾಗಿದ್ದಾರೆ. ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು ಪರಿಹಾರ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದರು.

ಪ್ರವಾಹ ಪರಿಹಾರ ಮತ್ತು ಪ್ರವಾಹ ನಷ್ಟ ಅಧ್ಯಯನಕ್ಕೆ ಈಗಾಗಲೆ 3 ತಂಡಗಳನ್ನು ರಚಿಸಲಾಗಿದೆ. ಕೇಂದ್ರ ಸರಕಾರ ಸೂಕ್ತ ನೆರವು ನೀಡುವ ಭರವಸೆ ನೀಡಿದೆ. ಯಾವುದೇ ವಿಳಂಬ ಧೋರಣೆ ಮಾಡದೆ ಪ್ರವಾಹ ಪರಿಹಾರ ಕಾರ್ಯಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button