ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದರ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡಿನ ಡಿಎಂಕೆ ಮುಖಂಡ ಇಳಂಗೋವನ್ ಕನ್ನಡಿಗರು ಮತ್ತಷ್ಟು ಕೆರಳುವಂಥ ಹೇಳಿಕೆ ನೀಡಿದ್ದಾರೆ.
“ಕಾವೇರಿ ನದಿ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೇರಿದ್ದಲ್ಲ, ಕಾವೇರಿ ನದಿಯ ಮಾಲೀಕತ್ವ ಕರ್ನಾಟಕಕ್ಕಿಲ್ಲ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಒಂದು ರಾಜ್ಯದಲ್ಲಿ ಉಗಮಿಸಿ ಹರಿಯುವ ಯಾವುದೇ ನದಿಯನ್ನು ಆ ರಾಜ್ಯ ತನ್ನದು ಎಂದು ಹೇಳಲಾಗದು. ನದಿಗಳು ಹರಿಯಬೇಕು, ನದಿಯಿಂದ ತಗ್ಗು ಪ್ರದೇಶಗಳಿಗೂ ಅನುಕೂಲವಾಗಬೇಕು, ಅದು ಅಂತಾರಾಷ್ಟ್ರೀಯ ಮಟ್ಟದ ತಿಳಿವಳಿಕೆ. ನದಿ ಉಗಮಗೊಂಡು ಅದೇ ರಾಜ್ಯದಲ್ಲಿ ನಿಂತರೆ ಅವರು ನೀರನ್ನು ತೆಗೆದುಕೊಳ್ಳಬಹುದು. ಆದರೆ, ಅದು ಅಲ್ಲಿಂದ ಪ್ರಾರಂಭವಾಗಿ ಹರಿದರೆ, ನದಿಯ ಮಾಲೀಕನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ” ಎಂದು ಇಳಂಗೋವನ್ ಹೇಳಿದ್ದಾರೆ.
ಇಳಂಗೋವನ್ ಅವರ ಈ ಹೇಳಿಕೆಗೆ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ