
ಪ್ರಗತಿವಾಹಿನಿ ಸುದ್ದಿ, ಸಿಡ್ನಿ(ಆಷ್ಟ್ರೇಲಿಯಾ) -ವೀರಶೈವಧರ್ಮಕ್ಕೆ ಸನಾತನ ಪರಂಪರೆಯಿದೆ. ಈ ಧರ್ಮದ ಆಚಾರ ವಿಚಾರ, ಸಂಸ್ಕಾರಗಳನ್ನು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಬಸವಾದಿ ಶಿವಶರಣರು ಪ್ರತಿಪಾದಿಸಿದ್ದಾರೆ. ವೀರಶೈವಧರ್ಮವನ್ನು ವಿದೇಶದಲ್ಲಿಯೂ ಕೂಡ ಉಳಿಸಿ ಬೆಳೆಸಿದ ಕೀರ್ತಿ ಆಷ್ಟ್ರೇಲಿಯಾದ ಸಿಡ್ನಿಯ ವೀರಶೈವ ಸಮಾಜಕ್ಕೆ ಸಲ್ಲುತ್ತದೆ ಎಂದು ಹುಕ್ಕೇರಿಯ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಏಸಿಯಾ ಪೆಸಿಪಿಕ್‌ನ ಏಸಿಯಾ ಪೆಸಿಪಿಕ್‌ನ ವೀರಶೈವ ಸಮಾಜದ ಹನ್ನೊಂದನೆಯ ವಾರ್ಷಿಕೋತ್ಸವ ವೀರಶೈವ ಸಮಾಜದ ಹನ್ನೊಂದನೆಯ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಂಗ್ಲಭಾಷೆಯಲ್ಲಿ ಮಾತನಾಡಿದ ಬೆಂಗಳೂರು ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಹತ್ತು ವರ್ಷದ ಹಿಂದೆ ಈ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡು ಈ ಧರ್ಮದ ಸನಾತನ ಪರಂಪರೆಯ ಇತಿಹಾಸವನ್ನು ಹೇಳಿ ಈ ಸಂಸ್ಥೆಯು ಹತ್ತು ವರ್ಷದಿಂದ ನಿರಂತರವಾಗಿ ಸಮಾಜ ಕಟ್ಟುವ ಕಾರ್ಯಮವನ್ನು ಮಾಡುತ್ತಿದೆಯಷ್ಟೇ ಅಲ್ಲದೇ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ವಚನಸಾಹಿತ್ಯವನ್ನು ಮನೆಮನೆಗೆ ಮುಟ್ಟಿಸಿರುವುದು ಅಭಿಮಾನದ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಬೇಬಿಮಠ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ವೀರಶೈವಧರ್ಮದಲ್ಲಿ ಗುರು ವಿರಕ್ತರು ಎರಡು ಕಣ್ಣುಗಳಿದ್ದಂತೆ ಇವರು ಸಮಾಜದ ಸ್ವಾಸ್ಥ್ಯವನ್ನು ಕಾಯುವ ಅವಶ್ಯಕತೆ ತುಂಭಾ ಇದೆ. ಗುರು ವಿರಕ್ತರು ಒಂದಾಗಿ ಬಂದು ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದ ಶಿವಗಂಗಾಕ್ಷೇತ್ರದ ಶ್ರೀ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಧರ್ಮ ಮನುಷ್ಯನ ಅವಿಭಾಜ್ಯ ಅಂಗ, ಮಾನವೀಯ ಮೌಲ್ಯಗಳನ್ನು ಒಳಗೊಂಡ ವೀರಶೈವಧರ್ಮ ವಿಶ್ವಕ್ಕೆ ಆದರ್ಶವಾದದ್ದು ಎಂಬುದಾಗಿ ಹೇಳಿದರು.
ವೀರಶೈವ ಸಮಾಜ ಆಪ್ ಏಸಿಯಾ ಪೆಸಿಪಿಕ್‌ನ ಅಧ್ಯಕ್ಷರಾದ ಡಾ. ಸಿದ್ಧಲಿಂಗೇಶ್ವರ ಒರೇಕೊಂಡೆ ಮಾತನಾಡಿ, ನಮ್ಮ ಸಮಾಜದ ಮಕ್ಕಳಿಗೆ ಸಂಸ್ಕಾರ ನೀಡುವ ಅವಶ್ಯಕತೆ ತುಂಬಾ ಇದೆ. ಗುರು ವಿರಕ್ತ ಪರಂಪರೆಯ ನಾಲ್ಕು ಜನ ಮಠಾಧೀಶರು ಭಾರತದ ಬೆಳಕಾಗಿ ಆಷ್ಟ್ರೇಲಿಯಾ ದೇಶಕ್ಕೆ ಬಂದಿರುವುದು ಅಭಿಮಾನದ ಸಂಗತಿ. ಸಿಡ್ನಿಯ ಕೌನ್ಸಿಲರ್ ಸಮೀರ ಪಾಂಡೆ ಮತ್ತು ಆಷ್ಟ್ರೇಲಿಯಾ ವಿಶ್ವ ಹಿಂದು ಪರಿಷತ್‌ನ ಸುರೇಂದ್ರ ಜೈನ್ ವೀರಶೈವಧರ್ಮ ಪ್ರಾಚೀನ ಪರಂಪರೆಯನ್ನು ನೆನಪಿಸಿದರು.
ವೇದಿಕೆಯ ಮೇಲೆ ವೀರಶೈವ ಸಮಾಜ ಆಪ್ ಏಸಿಯಾ ಪೆಸಿಪಿಕ್‌ನ ಪದಾಧಿಕಾರಿಗಳಾದ. ಡಾ. ಓಂಕಾರಸ್ವಾಮಿ, ವಿಜಕುಮಾರ ಹಲಗಲಿ, ಶಿವಾನಂದ ಮರೆಗುದ್ದಿ, ಸುರೇಶ್, ಭಾಗ್ಯಾ ಶಂಕರ್, ಮುಂತಾದವರು ಉಪಸ್ಥಿತರಿದ್ದರು.
ವೀರಶೈವ ರತ್ನ ಪ್ರಶಸ್ತಿ ಪ್ರದಾನ:
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ರಂಗದಲ್ಲಿ ವಿಶೇಷ ಕಾರ್ಯವನ್ನು ಮಾಡುತ್ತಿರುವ ಹುಕ್ಕೇರಿ ಹಿರೇಮಠ, ಬೇಬಿಮಠ, ಶಿವಗಂಗಾ ಮೇಲಣಗವಿಮಠದ ಹಾಗೂ ಬೆಂಗಳೂರು ವಿಭೂತಿಪುರಮಠ ಶ್ರೀಗಳಿಗೆ ವೀರಶೈವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ