Kannada NewsKarnataka NewsLatest
ಸಂಪೂರ್ಣ ಬೆಳಗಾವಿ ಗ್ರಾಮೀಣ ಕ್ಷೇತ್ರ ದೇವರ ಸನ್ನಿಧಿಯಂತಿದೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಎಳಬೈಲ್ ಗ್ರಾಮದ ಶ್ರೀ ದುರ್ಗಾ ಮಾತಾ ಮಂದಿರ ಕಳಸಾರೋಹಣ ಹಾಗೂ ವಾಸ್ತು ಶಾಂತಿ ಪೂಜಾ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗಿಯಾದ ಶಾಸಕಿ ಲಕ್ಷ್ಮೀ ಹೆ್ಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಸಂಪೂರ್ಣ ಬೆಳಗಾವಿ ಗ್ರಾಮೀಣ ಕ್ಷೇತ್ರ ದೇವರ ಸನ್ನಿಧಿಯಂತಿದೆ. ಕ್ಷೇತ್ರದಲ್ಲಿ ಕಳೆದ 4 ವರ್ಷದಲ್ಲಿ ಗರಿಷ್ಠಮಟ್ಟದಲ್ಲಿ ದೈವಿಕ ಸಮಾರಂಭಗಳು, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ರಮಗಳು ನೆರವೇರಿವೆ. ಇಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ದೇವಸ್ಥಾನ ಹಾಗೂ ದೇವಸ್ಥಾನದ ಸಮುದಾಯ ಭವನಗಳಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸಹಾಯ ನೀಡಲಾಗಿದೆ. ಜನರ ನೆಮ್ಮದಿಯ ಬದುಕನ್ನು ಪ್ರಾರ್ಥಿಸಿ ದೇವರ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ನಾನು ಯಾವುದೇ ದೇವರ ಕ್ಷೇತ್ರಕ್ಕೆ ಹೋದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆಯುಷ್ಯ, ಆರೋಗ್ಯಕ್ಕಾಗಿ ಮೊದಲು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಶ್ರಿ ಹರಿ ಗುರು ಮಹಾರಾಜ ರುದ್ರ ಕೇಸರಿ ಮಠ ಲಕ್ಷ್ಮೀ ಟೇಕ್ ಗಣೇಶಪುರ ಬೆಳಗಾವಿ, ಮಹೇಶ್ ಪಾಟೀಲ, ಯುವರಾಜಣ್ಣ ಕದಂ, ಪರಶುರಾಮ ಪಾಟೀಲ, ಮಾರುತಿ ಶಹಾಪೂರಕರ, ಮನೋಹರ್ ಬೆಳಗಾಂವ್ಕರ, ಧನಂಜಯ ಮೋರೆ, ಗುಂಡು ಪಾಟೀಲ ಅರುಣ ಪಾಟೀಲ, ನಾಮದೇವ ಮೋರೆ ರಾಜು ಜಾಂಗ್ರೂಚೆ, ಗುರುನಾಥ ಜಾಂಗ್ರೂಚೆ, ಮಲ್ಲಪ್ಪ ಮರಗಾಳೆ, ಗಾಯತ್ರಿ ಸುತಾರ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾದಕ್ಷ, ಸರ್ವಸದಸ್ಯರು ಹಾಗೂ ದುರ್ಗಾ ಮಾತಾ ಸಾರ್ವಜನಿಕ ಯುವಕ ಮಂಡಳದ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ