https://youtu.be/rG_kGvtke8w
ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಇಡೀ ವಿಶ್ವ ಖಾತರದಿಂದ ನೋಡುತ್ತಿದ್ದ ಚಂದ್ರಯಾನದ ಕೊನೆಯ ಕ್ಷಣದ ವೈಫಲ್ಯ ಸಂಭ್ರಮದ ಕ್ಷಣವನ್ನು ಕಸಿದುಕೊಂಡಿತು. ಕಳೆದ ಜುಲೈ 22ರಂದು ನಭಕ್ಕೆ ಚಿಮ್ಮಿದ್ದ ಚಂದ್ರಯಾನ ನೌಕೆ ಕೇವಲ 2.1 ಕಿಮೀ ಅಂತರದಲ್ಲಿ ಸಂಪರ್ಕ ಕಡಿದುಕೊಂಡಿತು.
ನೌಕೆ ಹೊತ್ತೊಯ್ದಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಾಗಿತ್ತು. ಲ್ಯಾಂಡರ್ ಒಳಗಿದ್ದ ಪ್ರಜ್ಞಾನ್ ರೋವರ್ ರೆಕ್ಕೆ ಬಿಚ್ಚಿ ಚಂದ್ರನ ಮೇಲ್ಮೈ ಮೇಲೆ ಓಡಾಡಬೇಕಿತ್ತು. ಆದರೆ ಆ ಹೊತ್ತಿಗೆ ಸಂಪರ್ಕ ಕಡಿದು ಹೋಯಿತು. ಇದರಿಂದಾಗಿ ಇಸ್ರೋ ವಿಜ್ಞಾನಿ ಕೆ.ಶಿವನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ರಾಷ್ಟ್ರ ಒಂದು ಕ್ಷಣ ಆಘಾತಕ್ಕೆ ಒಳಗಾಯಿತು. ಶಿವನ್ ಕಣ್ಣೀರು ಹಾಕಿದರು.
ಇದನ್ನೂ ಓದಿ – ಚಂದ್ರನೆಡೆಗೆ ಜಿಗಿದ ಬಾಹುಬಲಿ
ಆದರೆ ಪ್ರಧಾನಿ ನರೇಂದ್ರ ಮೋದಿ ಇಡೀ ಇಸ್ರೋ ತಂಡಕ್ಕೆ ಧೈರ್ಯ ತುಂಬಿದರು. ಇದನ್ನುವೈಫಲ್ಯ ಎನ್ನಲು ಸಾಧ್ಯವಿಲ್ಲ. ಮುಂದಿನ ಯಶಸ್ಸಿಗೆ ಮೆಟ್ಟಿಲು. ಇಂತಹ ದೊಡ್ಡ ಗುರಿ ಹಾಕಿಕೊಂಡಾಗ ಸಣ್ಣ ವೈಫಲ್ಯಗಳು ಸಹಜ. ಇದಕ್ಕೆ ಎದೆಗುಂದಬೇಕಿಲ್ಲ ಎಂದು ಶಿವನ್ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು ಮೋದಿ.
ಮೋದಿ ಈ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ನಿನ್ನೆ ರಾತ್ರಿಯೇ ಬೆಂಗಳೂರಿನಗೆ ಬಂದಿಳಿದಿದ್ದರು. ಪೀಣ್ಯದ ಇಸ್ರೋ ಕೇಂದ್ರದಲ್ಲಿ ಖಾತರದಿಂದ ಕಾಯುತ್ತಿದ್ದರು.
ಕಳೆದ 12 ವರ್ಷಗಳಿಂದ ಇಸ್ರೋ ವಿಜ್ಞಾನಿಗಳು ಈ ಒಂದು ಸಂಭ್ರಮದ ಕ್ಷಣಕ್ಕಾಗಿ ಶ್ರಮಪಟ್ಟು ಕಾಯುತ್ತಿದ್ದರು. ಕಳೆದ 47 ದಿನಗಳಲ್ಲಿ ಎಲ್ಲವೂ ಸರಿಯಾದ ದಿಕ್ಕಿನಲ್ಲೇ ಇತ್ತು. ಹಾಗಾಗಿ ಕೊನೆಯ ಕ್ಷಣದಲ್ಲಿ ಇಂತಹದ್ದೊಂದು ಸಣ್ಣ ಸಮಸ್ಯೆ ಉಂಟಾಗಲಿದೆ ಎನ್ನುವ ನಿರೀಕ್ಷೆ ಇರಲಿಲ್ಲ. ಕೊನೆಯ ಕ್ಷಣ ಬಹಳ ಸೂಕ್ಷ್ಮವಾದದ್ದೆನ್ನುವ ಕಲ್ಪನೆ ಇದ್ದರೂ ತೊಂದರೆಯಾಗದಿರಲಿ ಎಂದು ಎಲ್ಲರೂ ದೇವರಲ್ಲಿ ಬೇಡಿಕೊಂಡಿದ್ದರು.
ಈಗ ಸಂಪರ್ಕ ಕಡಿದುಕೊಂಡರೂ ಕೆಲವೊಮ್ಮೆ ಅನಿರೀಕ್ಷಿತವಾಗಿ ಮತ್ತೆ ಸಂಪರ್ಕ ಸಾಧಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿರೀಕ್ಷೆ ಇನ್ನೂ ಮುಗಿದಿಲ್ಲ. ಅಲ್ಲದೆ ಈವರೆಗಿನ ಸಾಧನೆ ಕೂಡ ಸಣ್ಣದೇನಲ್ಲ.
ಇದನ್ನೂ ಓದಿ – ತಾಂತ್ರಿಕ ಸಮಸ್ಯೆ: ಚಂದ್ರಯಾನ 2 ಉಡಾವಣೆ ಮುಂದಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ