ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ರಾಜಸ್ಥಾನದ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧರಾಗಿದ್ದ ಜಲಾಲುದ್ದೀನ್ ಮಕ್ಬಲಾಸಾಬ ಅಮ್ಮಣಗಿ ಅವರ ಪ್ರಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮವಾದ ತಾಲೂಕಿನ ಶಿರಹಟ್ಟಿ ಬಿಕೆ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಕಲ ಸರಕಾರಿ ಮತ್ತು ಸೇನಾ ಗೌರವಗಳೊಂದಿಗೆ ನೆರವೇರಿತು.
ಅಂತ್ಯಕ್ರಿಯೆಯಲ್ಲಿ ಗಣ್ಯಮಾನ್ಯರೂ ಸೇರಿದಂತೆ ೧೦ ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ತಾಲೂಕಿನ ಎಲಿಮೂನ್ನೋಳಿ, ಹಂಚಿನಾಳ, ಹುಲ್ಲೊಳಿ, ನಾಗರಮೂನ್ನೋಳಿ, ಸೇರಿದಂತೆ ನಾನಾ ಗ್ರಾಮಗಳ ಮಾಜಿ ಯೋಧರರು ಆಗಮಿಸಿ ಜಲಾಲುದ್ದೀನ ಅವರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮುಸ್ಲಿಂ ಸಮಾಜದ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಸೋಮವಾರ ನಿಧನರಾಗಿದ್ದ ಜಲಾಲುದ್ದೀನ್ ಪ್ರಾರ್ಥಿವ ಶರೀರ ರಾಜಸ್ಥಾನ ಮಾರ್ಗದಿಂದ ಗೋವಾಕ್ಕೆ ಬುಧವಾರ ರಾತ್ರಿ ಹುಕ್ಕೇರಿ ತಲುಪಿತು. ತಡರಾತ್ರಿಯಾದ್ದರಿಂದ ಸರಕಾರಿ ಆಸ್ಪತ್ರೆಯಲ್ಲಿ ಶವವಿಟ್ಟು ಗುರುವಾರ ಬೆಳಗ್ಗೆ ಶಿರಹಟ್ಟಿ ಗ್ರಾಮಕ್ಕೆ ತರಲಾಯಿತು. ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜನರ ಅಂತಿಮ ದರ್ಶನಕ್ಕೆ ಇಡಲಾಯಿತು.
ಜಲಾಲುದ್ದೀನ್ ಗೆ ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ. ಸಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಯೋಧ ಸತತ ೨೮ ವರ್ಷಗಳ ಸೇವೆ ಸಲ್ಲಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರನಾಗಿದ್ದನು.
೮ ದಿನಗಳ ಹಿಂದೆಯೇ ರಜೆ ಮುಗಿಸಿಕೊಂಡು ಮತ್ತೆ ಕರ್ತವ್ಯಕ್ಕೆ ಹೋಗುವಾಗ, ಇನ್ನು ಕೇವಲ ೫ ತಿಂಗಳ ಮಾತ್ರ ನನ್ನ ಸೇವೆ ಉಳಿದಿದೆ, ಮರಳಿ ಬಂದು ಕುಟುಂಬ ಹಾಗೂ ಗ್ರಾಮಸ್ಥರ ಜೊತೆ ಕಾಲಕಳೆಯುತ್ತೇನೆಂದು ಹೇಳಿ ಹೋದವ ಮರಳಿ ಶವವಾಗಿ ಬಂದಿರುವುದನ್ನು ಕಂಡು ಜನರು ದು:ಖಿಸುವುದನ್ನು ನೋಡಿದರೆ ಕರಳು ಚುರ್ ಎನ್ನವಂತಿತ್ತು.
ಯೋಧ ಜಲಾಲುದ್ದೀನ್ ದರ್ಶನಕ್ಕಾಗಿ ಶಾಲಾ ಮಕ್ಕಳು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿರುವಾಗ ದುಃಖ ತುಂಬಿ ಕಣ್ಣಲ್ಲಿ ನೀರು ತುಂಬಿಕೊಂಡರು. ಜಲಾಲುದ್ದೀನ್ ಅಮರ್ ರಹೇ, ಜಯ್ ಜವಾನ್ ಜಯ್ ಕಿಸಾನ್ ಎಂದು ಘೋಷೆಯೊಂದಿಗೆ ಕೈಯಲ್ಲಿ ತಿರಂಗಾ ಧ್ವಜ ಹಿಡಿದು ಗ್ರಾಮದ ಪ್ರಮುಖ ಬೀದಿಗಳು ಮೇರವಣಿಗೆಯಲ್ಲಿ ತೊಡಗಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಸಹಕಾರಿ ಧುರೀಣ ಪೃಥ್ವಿ ರಮೇಶ ಕತ್ತಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಡಿ.ಕೆ. ಅವರಗೊಳ, ತಾಲೂಕಾ ದಂಡಾಧಿಕಾರಿ ರೇಷ್ಮಾ ತಾಳಿಕೋಟಿ, ಬಿಜೆಪಿ ಘಟಕಾಧ್ಯಕ್ಷ ಪರಗೌಡ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜು ಬಸ್ತವಾಡ, ಬಿಜೆಪಿ ಯುವಮುರ್ಚಾದ ಸದಸ್ಯ ಮಹಾವೀರ ಬಾಗಿ, ಗ್ರಾ.ಪಂ ಅಧ್ಯಕ್ಷ, ಗ್ರಾ.ಪಂಅಭಿವೃದ್ದಿ ಅಧಿಕಾರಿ ಸಂತೋಷ ಕಬ್ಬಗೋಳ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ರಮೇಶ ಹುಂಜಿ, ಲಾಲಸಾಹೇಬ ಅಮ್ಮಣಗಿ, ಅಲಿಸಾಹೇಬ ಅಮ್ಮಣಗಿ, ರಾಜು ಅಮ್ಮಣಗಿ, ಸೇರಿದಂತೆ ಗ್ರಾಮಸ್ಥರು, ಜನಪ್ರತಿನಿಧಿಗಳು, ಶಿಕ್ಷಕರು, ಮಹಿಳೆಯರು ಆಗಮಿಸಿ ಅಂತಿನ ದರ್ಶನ ಪಡೆದುಕೊಂಡರು.
ಪಿಎಸ್ ಐ ಶಿವಾನಂದ ಗುಡಗನಟ್ಟಿ ಹಾಗೂ ಪೋಲಿಸ್ ಸಿಬ್ಬಂದಿಗಳ ಜಲಾಲುದ್ದೀನ್ ಅವರ ಅಂತಿಮ ದರ್ಶನ ಸುಗಮವಾಗವಂತೆ ಶಿಸ್ತುಬದ್ದ ವ್ಯವಸ್ಥೆ ಮಾಡಿದರು.
ತಾಲೂಕಿನ ಶಿರಹಟ್ಟಿ ಗ್ರಾಮದ ಯೋಧ ಜಲಾಲುದ್ದೀನ್ ಅವರು ೨೮ ವರ್ಷಗಳ ಸೇನೆಯಲ್ಲಿ ಸೇವೆ ಸಲ್ಲಿಸಿ ಹೃದಘಾತದಿಂದ ನಿಧನರಾಗಿರುವುದು ದು:ಖಕರ ವಿಷಯವಾಗಿದೆ, ಅವರ ಕುಟುಂಬದವರಿಗೆ ಪರಮಾತ್ಮನು ದು:ಖ ಸಹಿಸಿಕೊಳ್ಳುವ ಶಕ್ತಿ ನೀಡಿಲಿ.
-ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ.
ತಂದೆ ಇಬ್ಬರು ಮಕ್ಕಳು ಸೇನೆಯಲ್ಲಿ ಕಾರ್ಯನಿರ್ವಹಿಸಿ ಜನರಿಗೆ ಮಾದರಿಯಾಗಿದ್ದಾರೆ. ಇಂತ ಯೋಧ ಜಲಾಲುದ್ದೀನ್ ಅವರನ್ನು ಕಳೆದುಕೊಂಡಿರುವುದು ವಿಷಾದನೀಯವಾಗಿದೆ, ಇವರ ಕುಟುಂಬದ ದೇಶ ಸೇವೆ ಆದರ್ಶವಾಗಿದೆ.
-ಶಾಸಕ ಉಮೇಶ ಕತ್ತಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ