Kannada NewsKarnataka NewsLatest

ಚಿಕ್ಕೋಡಿ ಖಾಸಗಿ ಬ್ಯಾಂಕ್ ನಿಂದ 6.47 ಲಕ್ಷ ರೂ. ಕದ್ದಿದ್ದ ನಾಲ್ವರು ಅಂದರ್; ಜಮಖಂಡಿಯಲ್ಲೂ ಕನ್ನ ಹಾಕಿದ್ದ ಖದೀಮರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚಿಕ್ಕೋಡಿಯ ಖಾಸಗಿ ಫೈನಾನ್ಸ್ ಕೀ ಮುರಿದು ಲಾಕರ್ ನಲ್ಲಿದ್ದ 6.47 ಲಕ್ಷ ರೂ. ಕದ್ದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಮೇಶ ಕೃಷ್ಣಪ್ಪ ನಾಯಕ, ಪರಸಪ್ಪ ಸತ್ಯವ್ವ ಅಮ್ಮೋಜಿಗೋಳ, ಬಸವರಾಜ ಉಮೇಶ ಕುಂಚನೂರ ಹಾಗೂ ತುಕ್ಕಪ್ಪ ದುಂಡಪ್ಪ ಅಮ್ಮೋಜಿಗೋಳ ಬಂಧಿತ ಆರೋಪಿಗಳು.
  ಬ್ಯಾಂಕಿನ ಮ್ಯಾನೇಜರ್ ಗುರುನಾಥ ಈರಪ್ಪ ಕಳಸನ್ನವರ್ ಎಂಬುವವರು ಅ. 11 ರಂದು  ತಮ್ಮ ಬ್ಯಾಂಕಿನ ಕೀಲಿ ಮುರಿದು ಯಾರೋ ಕಳ್ಳರು ಒಟ್ಟು 6, 47, 096 ರೂ. ಕಳುವು ಮಾಡಿದ್ದಾರೆ ಎಂದು ಚಿಕ್ಕೋಡಿ ಠಾಣೆಯಲ್ಲಿ ದೂರು ನೀಡಿದ್ದರು.
  ಪ್ರಕರಣದ ತನಿಖೆ ನಡೆಸಿದ ಸಿಪಿಐ ಆರ್. ಆರ್. ಪಾಟೀಲ ಮತ್ತು ಸಿಬ್ಬಂದಿಯ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಚಿಕ್ಕೋಡಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸd ಬ್ಯಾಂಕಿನ ಮ್ಯಾನೇಜರ್ ಗುರನಾಥ ಈರಪ್ಪ ಕಳಸನ್ನವರ ಸಾ|| ಮುಗಳಿ ತಾ|| ಚಿಕ್ಕೋಡಿ ಇವರು ದಿನಾಂಕ: 11/09/2022 ರಂದು ಪಿರ್ಯಾದಿ ನೀಡಿದ್ದು,   ಫಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕನಲ್ಲಿ  10/09/2022 ರಂದು 2030 ಗಂಟೆಯಿಂದ ದಿನಾಂಕ: 11.09.2022 ರಂದು 1945 ಗಂಟೆಯ ನಡುವಿನ ವೇಳೆಯಲ್ಲಿ ಹಾಕಿದ ಕೀಲಿ ಮುರಿದು ಟ್ರೇಟರಿಯ ಲಾಕರ್‌ದಲ್ಲಿದ್ದ 6,47,096 ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
  ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಸ ಪೊಲೀಸ್ ಉಪಾಧೀಕ್ಷಕರ  ಮಾರ್ಗದರ್ಶನದಲ್ಲಿ  ಆರ್.ಆರ್.ಪಾಟೀಲ ಸಿ.ಪಿ.ಐ ಚಿಕ್ಕೋಡಿರವರು   ಯಮನಪ್ಪ ಮಾಂಗ ಪಿ.ಎಸ್.ಚಿಕ್ಕೋಡಿ, ಪ್ರವೀಣ ಬೀಳಗಿ ಪಿಎಸ್‌ಐ (ಅಪರಾಧ ವಿಭಾಗ) ಹಾಗೂ ಸಿಬ್ಬಂದಿ ಜನರಾದ ಆರ್. ಎಲ್. ಶೀಳನವರ, ಎಮ್. ಪಿ. ಸತ್ತಿಗೇರಿ, ಎಸ್. ಪಿ. ಗಲಗಲಿ, ಎಸ್. ಜೆ. ಬಡಿಗೇರ, ಸಂತೋಷ ಬಡೋದೆ, ಕುಮಾರ ಇಳಗೇರ ಹಾಗೂ ಟೆಕ್ನಿಕಲ್ ಸೆಲ್‌ನ ವಿನೋದ ಠಕ್ಕಣ್ಣವರ, ಸಚೀನ ಪಾಟೀಲ ರವರು ತನಿಖೆ ಕೈಕೊಂಡು, ಒಟ್ಟು ನಾಲ್ಕು ಜನ ಆರೋಪಿತರನ್ನು ಬಂಧಿಸಿದ್ದಾರೆ.
ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟಾರ್ ಸೈಕಲ್‌ಗಳು, 5 ಮೊಬೈಲ್‌ಗಳು, 45 ಗ್ರಾಂ ಬಂಗಾರದ ಆಭರಣಗಳು ಮತ್ತು 2 ಲಕ್ಷ 80 ಸಾವಿರ ಕಳ್ಳತನ ಮಾಡಿದ ಹಣ ವಶಪಡಿಸಿಕೊಳ್ಳಲಾಗಿದೆ.
 ಆರೋಪಿತರು ಇದೇ ತರಹ ಜಮಖಂಡಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕನ್ನು ಸಹ ಕಳ್ಳತನ ಮಾಡಿದ್ದಾರೆ. ಇನ್ನೂ ಮುಂದೆಯು ಸಹ ಗ್ರಾಮ ಶಕ್ತಿ ಪೈನಾನ್ಸ ಮುಧೋಳ ಮತ್ತು ಮೂಡಲಗಿ ಪಟ್ಟಣದಲ್ಲಿರುವ ಫಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕನ್ನು ಕಳ್ಳತನ ಮಾಡುವ ಯೋಜನೆ ಹೊಂದಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ.
https://pragati.taskdun.com/latest/murughamathabasavaprabhushreeappointedincharge/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button