Latest

ಜೋಕಾಲಿ ಆಡುತ್ತಿದ್ದಾಗ ಉರುಳಾದ ಸೀರೆ; ಬಾಲಕ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಸೀರೆ ಕಟ್ಟಿ ಜೋಕಾಲಿ ಆಡುತ್ತಿದ್ದ ವೇಳೆ ಉರುಳಾಗಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇದೀಗ ಅಂತದ್ದೇ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಜೋಕಾಲಿ ಆಡುತ್ತಿದ್ದ ವೇಳೆ ಬಾಲಕ ಮೃತಪಟ್ತಿರುವ ಘಟನೆ ಶಿವಮೊಗ್ಗ ಜಿಲ್ಲೆ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

13 ವರ್ಷದ ಕಿಶೋರ್ ಮೃತ ಬಾಲಕ. ಮೂಲತ: ದಾವಣಗೆರೆಯವನಾದ ಬಾಲಕ ಸಂಬಂಧಿಕರ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಸಿರೆಯಿಂದ ಕಟ್ಟಿದ್ದ ಜೋಕಾಲಿ ಆಡುತ್ತಿದ್ದಾಗ ಕುತ್ತಿಗೆ ಸೀರೆ ಸುತ್ತಿಕೊಂಡಿದ್ದು, ಬಾಲಕನಿಗೆ ಉರುಳಾಗಿ ಪರಿಣಮಿಸಿದೆ. ಕ್ಷಣಾರ್ಧದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button