Latest

ಸರಕಾರ 24 ಲಕ್ಷ ಜೀವಗಳೊಂದಿಗೆ ಆಟವಾಡುತ್ತಿದೆ -ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಗುರುವಾರದಿಂದ  ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ  ಕ್ರಮ ತಪ್ಪು, ಜನರ ಆರೋಗ್ಯ, ಯೋಗಕ್ಷೇಮ ರಕ್ಷಿಸುವ ಉದ್ದೇಶ ಹೊಂದಿದರೆ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸುವದಕ್ಕಿಂತ ಮಕ್ಕಳ, ಅವರ ಪಾಲಕರ, ಕುಟುಂಬದವರ, ಪರೀಕ್ಷೆಗೆ ನಿಯೋಜಿಸುವ ಸಿಬ್ಬಂದಿಗಳ, ಅವರ  ಕುಟುಂಬದವರ  ಕ್ಷೇಮ ಪಾಲಿಸುವುದು ಸರಕಾರಕ್ಕೆ ಮುಖ್ಯವಾಗಿದ್ದರೆ  ಪರೀಕ್ಷೆಯನ್ನು  ಮುಂದೂಡಬೇಕು. ಮಕ್ಕಳ ಒಂದು ವರುಷಕ್ಕಿಂತ  ಅವರ ಭವಿಷ್ಯ ಮುಖ್ಯವೆಂದು ಅರಿತು  ಪರೀಕ್ಷೆಯ ತೀರ್ಮಾನದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸರಕಾರದ ನಿರ್ಧಾರದ ಕುರಿತು ಮಂಗಳವಾರ ಟ್ವಿಟ್ ಮಾಡಿರುವ ಅವರು, ಕೊರೋನಾ ಸೋಂಕು ಅವ್ಯಾಹತವಾಗಿ ವ್ಯಾಪಿಸುತ್ತಿರುವ ಹಂತದಲ್ಲಿ ಅದನ್ನು ಬುದ್ಧಿವಂತಿಕೆಯಿಂದ  ಎದುರಿಸಬೇಕು, ಈ ಸಂದರ್ಭದಲ್ಲಿ ಪ್ರತಿಷ್ಠೆ, ಛಲ ಮುಖ್ಯವಲ್ಲ, ಪರೀಕ್ಷೆ  ನಡಿಸುವ ಮೂಲಕ  ಎಂಟು ಲಕ್ಷಕೂ ಹೆಚ್ಚು ವಿದ್ಯಾರ್ಥಿಗಳು, ಅವರ ಪಾಲಕರು, ಪರೀಕ್ಷಾ ಸಿಬ್ಬಂಧಿ ಸೇರಿ ಸುಮಾರು 24 ಲಕ್ಷ ಜನರ ಜೀವದೊಂದಿಗೆ ಸರಕಾರ  ಚೆಲ್ಲಾಟವಾಡುವದು ಒಪ್ಪತಕ್ಕದ್ದಲ್ಲ.

ಕೊರೋನಾ  ಸೋಂಕು ಈಗ  ಯಾವುದೇ ಸಂಪರ್ಕಗಳಿಲ್ಲದೆ ಸಮುದಾಯಗಳಲ್ಲೂ ವ್ಯಾಪಿಸಿಕೊಳ್ಳುತ್ತಿರುವುದರಿಂದ ಪರೀಕ್ಷೆ ರದ್ದು ಪಡಿಸಿದರೆ ಇನ್ನೂ ಒಳ್ಳೇದು ಎಂದು ಅವರು ಅಭಿಪ್ರಾಯಪಟ್ಟರು.

ಪರೀಕ್ಷೆ ನಡೆಸಲೇಬೇಕೆಂದರೆ, ಸೋಂಕು ಕಡಿಮೆಯಾದ ನಂತರ, ಇಲ್ಲವೇ  ಅಕ್ಟೋಬರ್ ನಲ್ಲಿ  ಪರಿಸ್ಥಿತಿ ನೋಡಿಕೊಂಡು ನಡೆಸಬಹುದು ಎಂದು ಅವರು ಸಲಹೆ ನೀಡ್ದಿದಾರೆ.

ಕೊರೊನಾ ಸೋಂಕು ಸಮುದಾಯ ಪ್ರಸರಣ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಪಡಿಸಿ, ಎಲ್ಲರನ್ನೂ ಉತ್ತೀರ್ಣಗೊಳಿಸಿದೆ. ಅದೇ ನೀತಿ  ರಾಜ್ಯದಲ್ಲೂ  ಪಾಲಿಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಏನಾದರೂ ಅವಘಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದೂ ಅವರು  ಎಚ್ಚರಿಕೆ ನೀಡಿದ್ದು,  ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button