*ಜಾಣ್ಮೆಯ ನಡೆ ಅನುಸರಿಸಿದ ರಾಜ್ಯಪಾಲ* *ಕಾಂಗ್ರೆಸ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನ ಮಂಡಳದ ವಿಶೇಷ ಅಧಿವೇಶನದ ರಾಜ್ಯಪಾಲರ ಭಾಷಣ ಅಂತ್ಯವಾಗಿದೆ.
ರಾಜ್ಯ ಸರಕಾರ ಬರೆದುಕೊಟ್ಟಿದ್ದ ಭಾಷಣ ಕೈ ಬಿಟ್ಟು ಕೇವಲ 3 ಸಾಲಿನಲ್ಲಿ ತಮ್ಮ ಭಾಷಣ ಮುಗಿಸುವ ಮೂಲಕ ರಾಜ್ಯಪಾಲರು ಜಾಣ್ಮೆಯ ನಡೆ ಅನುಸರಿಸಿದರು.
ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವುದನ್ನು ತಪ್ಪಿಸಲು ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ ಮಾತನಾಡಿದರು. ಅಧಿವೇಶನಕ್ಕೆ ಶುಭ ಕೋರುವ ಮೂಲಕ ಮಾತು ಆರಂಭಿಸಿ, ಅಲ್ಲಿಗೇ ತಮ್ಮ ಮಾತುಗಳನ್ನು ಮುಗಿಸಿ ನಿರ್ಗಮಿಸಿದರು.
ಆದರೆ ರಾಜ್ಯಪಾಲರ ನಡೆ ಕಾಂಗ್ರೆಸ್ ಸದಸ್ಯರನ್ನು ತೀವ್ರವಾಗಿ ಕೆರಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ರಾಜ್ಯಪಾಲರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿದ್ದಾರೆ, ಜನಪ್ರತಿನಿಧಿಗಳ ಸಭೆಗೆ ಅವಮಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೆಳಿದ್ದಾರೆ.
ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಕೇಂದ್ರ ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ. ಇದು ಸಂವಿದಾನದ ಉಲ್ಲಂಘನೆ. ನಾವು ಇದನ್ನು ಪ್ರತಿಭಟಿಸುವುದಾಗಿ ಸಿಎಂ ತಿಳಿಸಿದ್ದಾರೆ.
ಅಧಿವೇಶನದ ಮುಂದಿನ ಭಾಗ ಇದೀಗ ಕುತೂಹಲ ಕೆರಳಿಸಿದೆ.


