*ಸೂಕ್ತ ಸಮಯಕ್ಕೆ ನನ್ನನ್ನು, ಸಿಎಂ ಅವರನ್ನು ಹೈಕಮಾಂಡ್ ಕರೆಯುತ್ತೆ: ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದೆಹಲಿ ಪ್ರವಾಸದ ಬಗ್ಗೆ ಮಾತಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೇರಾನೇರ ಮಾತಾಡಿದ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡುವಂತೆ ಮಾಡಿದೆ. ದೆಹಲಿಗೆ ತೆರಳುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಹೈಕಮಾಂಡ್ ನಮ್ಮಿಬ್ಬರಿಗೂ ಏನೋ ಹೇಳಿದೆ. ಹೈಕಮಾಂಡ್ ನಾಯಕರು ಕರೆದಾಗ ಇಬ್ಬರೂ ಒಟ್ಟಿಗೆ ದೆಹಲಿಗೆ ಹೋಗುತ್ತೇವೆ’ ಎಂದಿದ್ದಾರೆ. ಆದರೆ ವರಿಷ್ಠರು ಹೇಳಿದ್ಯಾವ ವಿಚಾರ ಎಂಬ ಬಗ್ಗೆ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.
ಮಂಗಳವಾರ ದೆಹಲಿಗೆ ಹೋಗ್ತಿನಿ. ಜಲಮಂಡಲಿಯಿಂದ ಒಂದು ಕೆಲಸ ಇದೆ ಅದನ್ನು ಮುಗಿಸಬೇಕು. ಮೇಕೆದಾಟು ವಿಚಾರ ಚರ್ಚೆ ಮಾಡಲಾಗುತ್ತೆ. ಇಲಾಖೆಯ ಕೆಲಸದ ಬಗ್ಗೆ ಚರ್ಚೆ ಆಗೇಕಿದೆ. ಹೀಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ.
‘ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್ ನಲ್ಲಿ ತಿರಸ್ಕೃತಗೊಂಡಿದ್ದು ಈಗ ಒಂದು ಎಫ್‌ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.
ಕಾಂಗ್ರೆಸ್ ಅಂತರ್ಯುದ್ಧದಲ್ಲಿ ಒಪ್ಪಂದದ ಬಿರುಗಾಳಿ ಬೀಸುತ್ತಿದೆ. ಕುರ್ಚಿ ಕುರುಕ್ಷೇತ್ರದಲ್ಲಿ ಸಿಎಂ, ಡಿಸಿಎಂ ಜಂಗೀಕುಸ್ತಿ ಜೋರಾಗಿದೆ. ಬಣಗಳ ನಡುವೆ ಮಾತಿನ ಬಾಂಬ್ ಸ್ಫೋಟವಾಗುತ್ತಿದೆ. ಪಟ್ಟದ ಚದುರಂಗದ ಆಟದಲ್ಲಿ ಗೆಲ್ಲೋದು ಯಾರೋ ಅನ್ನೋದೇ ಸಸ್ಪೆನ್ಸ್
ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು ಆಗ ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಅಂದು ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ಅಂದು ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ, ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುವೆ. ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆ’ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಕುರ್ಚಿ ಕುರುಕ್ಷೇತ್ರದಲ್ಲಿ ಸಿಎಂ, ಡಿಸಿಎಂ ಪಗಡೆ ಆಟ ಜೋರಾಗಿದೆ. ನಾನೇ 5 ವರ್ಷ ಸಿಎಂ ಅಂತಾ ಸಿದ್ದರಾಮಯ್ಯ ವಿರೋಧಿ ಬಣದ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲು ಡಿಕೆಶಿ ಟೆಂಪಲ್ ರನ್ ನಡೆಸ್ತಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ಇತ್ತ ಕುರ್ಚಿ ಕಾಳಗ ಮಿತಿಮೀರಿದೆ. ದೆಹಲಿ ಪ್ರವಾಸಕ್ಕೆ ಡಿ.ಕೆ ಶಿವಕುಮಾರ್ ರೆಡಿಯಾಗಿದ್ದಾರೆ.
ಹೈಕಮಾಂಡ್ ನನ್ನ ಪರವಾಗಿದೆ. ಎರಡೂವರೆ ವರ್ಷದ ಅಗ್ರಿಮೆಂಟೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದರು. ಈ ಮಾತು ಸದ್ಯ ಅವರ ಬೆಂಬಲಿಗರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜೊತೆಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹೈಕಮಾಂಡ್‌ಗೂ ಸಂದೇಶ ರವಾನೆ ಆಗಿದೆ.


