

ಪ್ರಗತಿವಾಹಿನಿ ಸುದ್ದಿ, ಲಂಡನ್: ಲಂಡನ್ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ವಿದ್ಯಾರ್ಥಿಯೊಬ್ಬರು ನಾಡಧ್ವಜ ಅರಳಿಸುವ ಮೂಲಕ ಸುದ್ದಿಯಾಗಿದ್ದಾರೆ.
ಪದವಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಅವರು ಕನ್ನಡ ಧ್ವಜ ಪ್ರದರ್ಶನ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ಭಾರೀ ಪ್ರಮಾಣದಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರರೊಬ್ಬರು, “ನಮಗೆ ಭಾರತದ ಧ್ವಜ ಮಾತ್ರ ತಿಳಿದಿದೆ … ಕ್ಷಮಿಸಿ ಸ್ನೇಹಿತ ನೀವು ನಿಮ್ಮ ಎಂಎಸ್ ಮಾಡಿದ್ದೀರಿ, ಆದರೆ ಕೆಲವು ವಿಷಯಗಳನ್ನು ಕಲಿಸಲಾಗುವುದಿಲ್ಲ” ಎಂದು ಬರೆದಿದ್ದಾರೆ.
ಮತ್ತೊಬ್ಬರು, “ನಾವು 75 ವರ್ಷಗಳಿಂದ ಭಾರತೀಯರು. ಆದರೆ 2,500+ ವರ್ಷಗಳಿಂದ ಕನ್ನಡಿಗರು. ಹೌದು, ನಾವು ಹೆಮ್ಮೆಪಡುವ ಭಾರತೀಯರು ಆದರೆ ಕನ್ನಡ ನಮ್ಮ ಗುರುತು.” ಎಂದಿದ್ದಾರೆ.
ಫುಟ್ಬಾಲ್ ನಲ್ಲಿ ತೋರಿಸಲಾಯಿತು ಮೊದಲ ವ್ಹೈಟ್ ಕಾರ್ಡ್
ದೇವರ ದಾಸಿಮಯ್ಯನ ಮುದನೂರು. ಪುರಾತನ ವಚನ ಪುರುಷೋತ್ತಮನ ಗುರುತನ್ನು ಉಳಿಸುವ ಬಗೆ ಎಂತೋ ?
ದೇವರ ದಾಸಿಮಯ್ಯನ ಮುದನೂರು. ಪುರಾತನ ವಚನ ಪುರುಷೋತ್ತಮನ ಗುರುತನ್ನು ಉಳಿಸುವ ಬಗೆ ಎಂತೋ ?
ಯಾವುದೇ ವರ್ಗಾವಣೆ /ನಿಯೋಜನೆ ಪ್ರಸ್ತಾವನೆ ಸಲ್ಲಿಸಬೇಡಿ – ಸಿಎಂ ಸೂಚನೆ
