Latest

ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ದಾಳಿ: ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹಿರೇಬಾಗೇವಾಡಿ ಠಾಣೆ ವ್ಯಾಪ್ತಿಯ ಬಸ್ತವಾಡ ಕೆರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. 5 ಬೈಕ್ ಮತ್ತು 18,140 ರೂ. ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಇನಸ್ಪೆಕ್ಟರ್ ಜಿ.ಐ.ಕಲ್ಯಾಣ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿತು. ಹಣಮಂತ ನಿಸುನ್ನವರ, ಶ್ರೀಧರ ಭಜಂತ್ರಿ ಮತ್ತು ಯಾಸೀನ ನಧಾಪ ತಂಡದಲ್ಲಿದ್ದರು. ರವಿ ಸುಭಾಷ ಬಸ್ಮೆ ಸಾ. ವಡಗಾಂವ, ಬೆಳಗಾವಿ, ರಾಜು ಮಹಾದೇವಪ್ಪ ಮಮದಾಪೂರ ಸಾ. ಮಾರುತಿ ಗಲ್ಲಿ, ಬೆಳಗಾವಿ ಹಾಗೂ ಮೋಸಿನ್ ಖಾದರ ಸದರಸೋಪ ಸಾ. ಪಾಟೀಲ ಗಲ್ಲಿ, ಶಹಾಪೂರ, ಬೆಳಗಾವಿ ಬಂಧಿತರು.

ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Home add -Advt

Related Articles

Back to top button