ಪ್ರಗತಿವಾಹಿನಿ ಸುದ್ದಿ, ಕೋಲಂಬಿಯಾ: ಅಂಡರ್ ವೇರ್ ಧರಿಸಿ ಬೆಡ್ ಮೇಲೆ ಮಲಗಿ ಸಿಗರೇಟು ಸೇದುತ್ತ ಪ್ರಕರಣವೊಂದರ ವರ್ಚುವಲ್ ವಿಚಾರಣೆ ನಡೆಸಿದ ಮಹಿಳಾ ನ್ಯಾಯಾಧೀಶೆಯೊಬ್ಬರು ಅಮಾನತುಗೊಂಡಿದ್ದಾರೆ.
ನ್ಯಾಯಾಧೀಶೆ ವಿವಿಯನ್ ಪೊಲಾನಿಯಾ ಅವರು ಟಾಪ್ ಹಾಗೂ ಅಂಡರ್ ವೇರ್ ಧರಿಸಿ ಹಾಸಿಗೆ ಮೇಲೆ ಮೊಬೈಲ್ ಹಿಡಿದು ಮಲಗಿದ್ದಲ್ಲದೆ ಸಿಗರೇಟ್ ಕೂಡ ಸೇದುತ್ತಲೇ ಜೂಮ್ ಮೀಟಿಂಗ್ ನಿಭಾಯಿಸುತ್ತಿರುವುದು ಚಿತ್ರೀಕರಣಗೊಂಡಿದೆ.
ಇಷ್ಟಕ್ಕೂ ಅವರು ಹಾಜರಾಗಿದ್ದ ಜೂಮ್ ಮೀಟಿಂಗ್ ಕಾರ್ ಬಾಂಬ್ ಸ್ಫೋಟದ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣ ಎನ್ನಲಾಗಿದೆ. ಇದಲ್ಲದೆ ಮೀಟಿಂಗ್ ನ ಒಂದು ಗಂಟೆಯಷ್ಟು ಕಾಲ ಅವರ ಕ್ಯಾಮೆರಾ ಆಫ್ ಆಗಿತ್ತು ಎಂದು ವಕೀಲರೊಬ್ಬರು ಆರೋಪಿಸಿದ ಮೇರೆಗೆ ನಾರ್ಟೆ ಡಿ ಸ್ಯಾಂಟ್ಯಾಂಡರ್‌ನಲ್ಲಿರುವ ನ್ಯಾಯಾಂಗ ಶಿಸ್ತಿನ ಆಯೋಗ ವಿಚಾರಣೆ ಕೈಗೊಂಡಿತು.
ಪೊಲಾನಿಯಾ ಅವರು ಬಹು ಆಡಳಿತಾತ್ಮಕ ನಿಯಮಗಳನ್ನು ಉಲ್ಲಂಘಿಸಿದ್ದಾಗಿ ಆಯೋಗ ತೀರ್ಪು ನೀಡಿ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಿ ಆದೇಶಿಸಿದೆ.
ಮತ್ತೊಂದು ಭೀಕರ ಅಪಘಾತ: ಬೆಳಗಾವಿ ASI ಪುತ್ರ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ