Latest

ಸ್ಕ್ವಿಡ್ ಗೇಮ್ ನಟನ ಮೇಲೆ ಲೈಂಗಿಕ ದುರುಪಯೋಗದ ಆರೋಪ

ಪ್ರಗತಿವಾಹಿನಿ ಸುದ್ದಿ, ಕಾಯ್ ಪುಂಗ್: ದಕ್ಷಿಣ ಕೋರಿಯಾದ ಹಿರಿಯ ನಟ, ‘ಸ್ಕ್ವಿಡ್ ಗೇಮ್’ ಖ್ಯಾತಿಯ ಓ ಯೊಂಗ್-ಸು ವಿರುದ್ಧ ಲೈಂಗಿಕ ದುರುಪಯೋಗದ ಆರೋಪ ಹೊರಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ನ್ಯಾಯಾಂಗ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟಕ್ಕೂ ಈ ಕಲಂಕ ಅಂಟಿಕೊಳ್ಳಲು ಕಾರಣವೇನು ಗೊತ್ತೇ?  78 ವರ್ಷ ವಯಸ್ಸಿನ ಓ ಯೊಂಗ್- ಸು 2017 ರಲ್ಲಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಸರಣಿಯೊಂದರಲ್ಲಿ ಅತ್ಯುತ್ತಮ ಪೋಷಕ ನಟನಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಮೊದಲ ದಕ್ಷಿಣ ಕೊರಿಯಾದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ಓ ಯೆಯೊಂಗ್-ಸು ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ.

1960ರಲ್ಲಿ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ ಅವರು ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕಿರುತೆರೆಗಳಲ್ಲೂ ನಟನೆ ಆರಂಭಿಸಿದ್ದರು.

ಅಂಡರ್ ವೇರ್ ನಲ್ಲಿ ಮಲಗಿ ದಂ ಎಳೆಯುತ್ತ ವಿಚಾರಣೆ ನಡೆಸಿದ ಲೇಡಿ ಜಡ್ಜ್ ಸಸ್ಪೆಂಡ್

Related Articles

Back to top button