Kannada NewsKarnataka NewsLatest

*CIL ನಿಂದ ಈಕ್ವಿಟಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ; ಕೇಂದ್ರ ಸಚಿವ ಸಂಪುಟ CIL ನಿಂದ ಈಕ್ವಿಟಿ ಹೂಡಿಕೆಯನ್ನು ಅನುಮೋದಿಸಿದೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಕೈಗೊಂಡ ಈ ಕ್ರಮದಿಂದ CIL ಮತ್ತು GAIL ಜಂಟಿ ಉದ್ಯಮದ ಮೂಲಕ ECL ಕಮಾಂಡ್‌ನಲ್ಲಿ ಕಲ್ಲಿದ್ದಲು-SNG ಯೋಜನೆಯನ್ನು ಸ್ಥಾಪಿಸಲು ನೆರವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ, MCL ಕಮಾಂಡ್‌ನಲ್ಲಿ ಕಲ್ಲಿದ್ದಲು-ಅಮೋನಿಯಂ ನೈಟ್ರೇಟ್ ಯೋಜನೆ ಸ್ಥಾಪಿಸಲು CIL ಮತ್ತು BHEL ಜಂಟಿ ಉದ್ಯಮವನ್ನು ರೂಪಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ಕೇಂದ್ರ ಸಚಿವ ಸಂಪುಟದ ಈ ಗಮನಾರ್ಹ ನಿರ್ಧಾರ ಕಚ್ಚಾ ಮತ್ತು ನೈಸರ್ಗಿಕ ಅನಿಲ ಆಧಾರಿತ ಉತ್ಪನ್ನಗಳ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಜೋಶಿ ಅಭಿಪ್ರಾಯಿಸಿದ್ದಾರೆ.

Home add -Advt

ಸ್ಥಳೀಯ ತಂತ್ರಜ್ಞಾನ ಮತ್ತು ಉತ್ಪನ್ನ ಆಧಾರಿತ ಅನಿಲೀಕರಣ ಸ್ಥಾವರಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಪಿಎಸ್ ಯು ಗಳು ಮತ್ತು ಖಾಸಗಿ ವಲಯದ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ.

ಮೂರು ವಿಭಾಗಗಳ ಅಡಿಯಲ್ಲಿ ಕಲ್ಲಿದ್ದಲು ಅನಿಲೀಕರಣ ಯೋಜನೆಗಳಿಗೆ 8,500 ಕೋಟಿ ರೂಪಾಯಿ ಆರ್ಥಿಕ ನೆರವು ಮೀಸಲಿಡಲಾಗುವುದು ಎಂದು ಸಚಿವ ಜೋಶಿ ಮಾಹಿತಿ ನೀಡಿದ್ದಾರೆ.

Related Articles

Back to top button