Latest

ಸಚಿವರೆದುರೇ ಅನಾವರಣಗೊಂಡ ಕಳಪೆ ಕಾಮಗಾರಿ; ಕ್ರಮವೇನು ಸಿ.ಸಿ.ಪಾಟೀಲರೇ?

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಹಾಸನ ಸಕಲೇಶಪುರ ಶಿರಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ದುರಸ್ತಿ ಕಾರ್ಯ ಕೆಲವು ಕಡೆ ಕಳಪೆಯಾಗಿದ್ದು, ಈ ಬಗ್ಗೆ ಸ್ಥಳದಲ್ಲಿ  ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ  ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರು ಎಚ್ಚರಿಕೆ ನೀಡಿ ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದರು.
 ಇಂದು ನೆಲಮಂಗಲ ಕ್ರಾಸ್ ನಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಮಳೆ ಅನಾಹುತದಿಂದ ಉಂಟಾಗಿರುವ ಹೆದ್ದಾರಿ ಹಾನಿಯನ್ನು ಪರಿಶೀಲಿಸಿದ ಬಳಿಕ ಮಾತನಾಡುತ್ತಿದ್ದ ಅವರು, ಹಾಸನ ಸಕಲೇಶಪುರ ಭಾಗದ ಹೆದ್ದಾರಿ ವಿಸ್ತರಣೆ ಕಾಮಗಾರಿಯು ನಾನಾ ಕಾರಣದಿಂದ ವಿಳಂಬವಾಗಿತ್ತು. ಅಷ್ಟೇಅಲ್ಲ ಬಾಳ್ಳುಪೇಟೆ  ಮತ್ತಿತರ  ಕಡೆಗಳಲ್ಲಿ  ಹೆದ್ದಾರಿ  ಕಾಮಗಾರಿಯು ಲೋಪದೋಷ/ ಕಳಪೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಮರ್ಪಕವಾಗಿ ಸರಿಪಡಿಸಲು ಸ್ಥಳದಲ್ಲಿಯೇ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ  ಎಂದು ಸಿ. ಸಿ. ಪಾಟೀಲರು ವಿವರಿಸಿದರು.
ಬೆಂಗಳೂರು- ಹಾಸನ- ಮಂಗಳೂರು ನಡುವಿನ ರಾಷ್ಟೀಯ ಹೆದ್ದಾರಿ ದುರಸ್ಥಿ ಕೆಲಸ ಸರಿಯಾಗಿ ನಡೆಯುವಂತಾಗಲು ಗುಣಮಟ್ಟ ನಿಯಂತ್ರಣಾಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button