Latest

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಹೋರಾಟದ ಬಿಸಿ

 ಪ್ರಗತಿವಾಹಿನಿ ಸುದ್ದಿ, ಪಣಜಿ: ಕಳೆದ ಅನೇಕ ವರ್ಷಗಳಿಂದ ಗೋವಾ ಮತ್ತು ಕರ್ನಾಟಕದ ನಡುವೆ ಮಹದಾಯಿ ನದಿ ವಿವಾದ ನಡೆಯುತ್ತಿದೆ. ಆದರೆ ಕಳೆದ ಒಂದೆರಡು ವರ್ಷಗಳಿಂದ ಈ ಹೋರಾಟ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ.

ಇದೀಗ ಗೋವಾದಲ್ಲಿ ನಡೆಯುತ್ತಿರುವ 50 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಹೋರಾಟದ ಬಿಸಿ ತಟ್ಟುವಂತಾಗಿದೆ.
ಮಹದಾಯಿ ಹೋರಾಟಗಾರರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ನಡೆಯುತ್ತಿರುವ ಸ್ಟೇಡಿಯಂ ಹೊರಭಾಗದಲ್ಲಿ ಮಹದಾಯಿ ರಕ್ಷಿಸಿ ಎಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದು, ಈ ಮೂಲಕ ಮಹದಾಯಿ ಬಿಸಿಯನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ತಟ್ಟುವಂತೆ ಮಾಡಿದ್ದಾರೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಗತ್ತಿನ 70 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಈ ಸಂದರ್ಭದಲ್ಲಿ ಹೋರಾಟ ತೀವ್ರಗೊಂಡಿದ್ದರಿಂದ ಈ ವಿಷಯ ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತಾಗಿದೆ.

ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯು ಇತ್ತೀಚೆಗೆ ನೀಡಿರುವ ಪರವಾನಗಿಯು ಗೋವಾ ಸರ್ಕಾರ ಮತ್ತು ಗೋವಾ ರಾಜ್ಯದ ಜನತೆಯ ನಿದ್ದೆಗೆಡಿಸಿದೆ. ಈ ಪರವಾನಗಿ ಹಿಂಪಡೆಯುವಂತೆ ಗೋವಾ ರಾಜ್ಯಾದ್ಯಂತ ತೀವ್ರ ಹೋರಾಟ ಆರಂಭಗೊಂಡಿದೆ.

ಇದೀಗ ಗೋವಾದಲ್ಲಿ ನಡೆಯುತ್ತಿರುವ 50 ನೇಯ ವರ್ಷದ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಮಹದಾಯಿ ಬಿಸಿ ತಟ್ಟುವಂತಾಗಿದೆ.

ಜಾವಡೇಕರ್‌ಗೆ ಮಹದಾಯಿ ಬಿಸಿ


ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಹೋತ್ಸವವನ್ನುದ್ದೇಶಿಸಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ಭಾಷಣ ಆರಂಭಿಸುತ್ತಿದ್ದಂತೆಯೇ ವೇದಿಕೆಯ ಕೆಳಭಾಗದಲ್ಲಿ ಕುಳಿತಿದ್ದ ಮೂರ‍್ನಾಲ್ಕು ಜನ ಪ್ರೇಕ್ಷಕರು ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಜಾವಡೇಕರ್ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.

ಇದರಿಂದಾಗಿ ಚಲನಚಿತ್ರೋತ್ಸವದಲ್ಲಿ ಜಾವಡೇಕರ್ ರವರಿಗೆ ಮಹದಾಯಿ ಬಿಸಿ ತಟ್ಟುವಂತಾಯಿತು. ಕೂಡಲೇ ಪೋಲಿಸರು ಘೋಷಣೆ ಕೂಗುತ್ತಿದ್ದವರನ್ನು ಬಂಧಿಸಿ ಕರೆದೊಯ್ದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ, ಅಮಿತಾಬ್, ರಜನಿಕಾಂತ್ ಉಪಸ್ಥಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button