
ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯ ಗೌಡಳ್ಳಿ ಗ್ರಾಮದ ಉರ್ದು ಶಾಲೆಯ ಹಿಂಭಾಗದ ಕಾಡಿನಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ದನವನ್ನು ಕಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಮುತ್ತಲಿಬ್ ತಂದೆ ಅಬ್ದುಲ್ ರೆಹಮಾನ್ ಸಾಕಿನ್ ಗೌಡಳ್ಳಿ ಈತನನ್ನು ಭಾನುವಾರ ಬೆಳಿಗ್ಗೆ ಬಂಧಿಸಿದ್ದು , ಈತನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ (ಕ್ರಮಾಂಕ 105/2021, ಕಲಂ 4,12(1) ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020, ಕಲಂ 149 ಐಪಿಸಿ) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ.
ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ ಪನ್ನೇಕರ್ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ್, ಪೊಲೀಸ್ ಉಪಾಧೀಕ್ಷಕ ರವಿ ಡಿ ನಾಯ್ಕ , ಸಿರ್ಸಿ ವೃತ್ತನಿರೀಕ್ಷಕ ರಾಮಚಂದ್ರ ನಾಯಕ ರವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಈರಯ್ಯಾ ಡಿಎನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರದೀಪ ರೇವಣಕರ್, ಚೇತನ ಅಲಗೇರಿ, ಗಣಪತಿ ನಾಯ್ಕ, ಚೇತನ ಜೆ.ಎನ್. ಜಿಮ್ಮು ಸಿಂದೆ, ಶ್ರೀಧರ್ ನಾಯ್ಕ ಆರೋಪಿಯನ್ನು ಬಂಧಿಸಲು ಕೈಗೊಂಡ ದಾಳಿಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ