ಪ್ರಗತಿವಾಹಿನಿ ಸುದ್ದಿ: ಪಂಚೆ ತೊಟ್ಟ ಕಾರಣಕ್ಕೆ ರೈತನೋರ್ವನನ್ನು ಬೆಂಗಳೂರಿನ ಮಾಲ್ ಒಂದರಲ್ಲಿ ಒಳಗೆ ಬಿಡದೇ ಸೆಕ್ಯೂರಿಟಿ ಗಾರ್ಡ್ ತಡೆದಿದ್ದ ಘಟನೆಯ ರೀತಿಯಲ್ಲೇ ರಾಂಚಿಯಲ್ಲೂ ಕೆಲ ಯುವಕರಿಗೆ ಬಟ್ಟೆಯ ವಿಚಾರವಾಗಿ ಮಾಲ್‌ಗೆ ಎಂಟ್ರಿ ನಿರಾಕರಿಸಲಾಗಿದೆ.
ವಿಡಿಯೋದಲ್ಲಿ ಕೆಲವು ಯುವಕರು ಕೇಸರಿ ಬಟ್ಟೆ ಧರಿಸಿ ಚಪ್ಪಲಿ ಹಾಕದೆ ಮಾಲ್‌ಗೆ ಹೋಗಲು ಯತ್ನಿಸಿದ್ದಾರೆ. ಆದರೆ ಮಾಲ್ ಉದ್ಯೋಗಿಗಳು ಯುವಕರನ್ನು ಪ್ರವೇಶ ದ್ವಾರದಲ್ಲಿ ನಿಲ್ಲಿಸಿದ್ದಾರೆ. ಇದು ಮಾಲ್ ಪ್ರೋಟೋಕಾಲ್ ಎಂದು ಉದ್ಯೋಗಿ ಹೇಳಿರುವುದು ವಿಡಿಯೋದಲ್ಲಿದೆ.
ಜಾರ್ಖಂಡ್‌ನ ರಾಜಧಾನಿ ರಾಂಚಿಯ ರಟು ರಸ್ತೆಯ ಮಾಲ್ ಆಫ್ ರಾಂಚಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಇಡೀ ವಿಚಾರದಲ್ಲಿ ರಾಜಕೀಯ ಬಿಸಿ ಏರಿದೆ. ಮಾಲ್ ಆಫ್ ರಾಂಚಿ ನೋಂದಣಿ ರದ್ದುಗೊಳಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ರಾಂಚಿಯ ಮಾಲ್‌ನಲ್ಲಿ ನಡೆದ ಈ ಘಟನೆಗೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ ಎಂದು ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿನ್ಹಾ ಪ್ರಶ್ನಿಸಿದ್ದಾರೆ. ವಿಚಾರವಾಗಿ ರಾಜಕೀಯ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಮಾಲ್ ಆಫ್ ರಾಂಚಿ ನೋಂದಣಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ