Cancer Hospital 2
Beereshwara 36
LaxmiTai 5

ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದ ಎನ್‍ಡಿಎ ಹಾಗೂ ಇಂಡಿಯಾ ಮೈತ್ರಿಕೂಟ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆಗೆ ಬೇಕಾಗಿರುವ ಸಂಖ್ಯೆಯನ್ನು ತಲುಪಿಲ್ಲ. ಹಾಗಾಗಿ ಬಿಜೆಪಿ ನಾಯಕರು ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕರು ಆರ್ ಜೆ ಡಿ ನಾಯಕ ಹಾಗೂ ನಿತೇಶ್ ಕುಮಾರ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುರನ್ನು ತಮ್ಮತ್ತ ಸೇಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. 

ಇಂದು ಹೊರಬಿದ್ದಿರುವ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ 543 ಸ್ಥಾನಗಳ ಪೈಕಿ ಎನ್‍ಡಿಎ ಮೈತ್ರಿಕೂಟ 295 ಸ್ಥಾನಗಳನ್ನು ಗಳಿಸಿದೆ. ಇದರಲ್ಲಿ ಬಿಜೆಪಿ ಏಕಾಂಗಿಯಾಗಿ 244 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಂಡಿಯಾ ಮೈತ್ರಿಕೂಟ 231 ಸ್ಥಾನಗಳನ್ನು ಗಳಿಸಿದ್ದು, ಕಾಂಗ್ರೆಸ್ ಏಕಾಂಗಿಯಾಗಿ 97 ಕ್ಷೇತ್ರ ಗೆದ್ದಿದೆ. ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್ 272 ಯಾವ ಪಕ್ಷವೂ ಪಡೆದುಕೊಂಡಿಲ್ಲ ಎಂಬುವುದು ಸ್ಪಷ್ಟವಾಗಿದೆ.‌

ಎನ್‍ಡಿಎ ಹಾಗೂ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕಾದರೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 16 ಸ್ಥಾನ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 13 ಸ್ಥಾನ ಪಕ್ಷಗಳ ಬೆಂಬಲ ಪಡೆಯುವುದು ಮುಖ್ಯವಾಗಿದೆ. ಹೀಗಾಗಿ, ಇಡೀ ದೇಶದ ಕಣ್ಣು ಚಂದ್ರಬಾಬು ನಾಯ್ದು ಹಾಗೂ ನಿತೀಶ್ ಕುಮಾರ ಅವರ ನಿರ್ಧಾರದ ಮೇಲಿದೆ. ಈಗಾಗಲೆ ಚಂದ್ರಬಾಬು ನಾಯ್ಡು ಹಾಗೂ ನಿತೇಶ್ ಕುಮಾರ ಅವರನ್ನು ಸಂಪರ್ಕಿಸಿದ್ದು ಅವರಿಂದ ಯಾವುದೆ ಸ್ಪಂದನೆ ಬಂದಿಲ್ಲ ಎಂದು ತಿಳಿದು ಬಂದಿದೆ.‌

ಟಿಡಿಪಿ ಹಾಗೂ ಜೆಡಿಯು ಎರಡೂ ಪಕ್ಷಗಳನ್ನು ಇಂಡಿಯಾ ಮೈತ್ರಿಕೂಟವನ್ನು ಸೇರಿಕೊಳ್ಳಲು ಆಫರ್ ನೀಡುತ್ತಿದಂತೆ ಅಲರ್ಟ್ ಆಗಿರುವ ಎನ್‍ಡಿಎ ನಾಯಕರು ಕೂಡಾ ಎರಡು ಬಣಗಳು ಟಿಪಿಡಿ ಹಾಗೂ ಜೆಡಿಯು ಪಕ್ಷಗಳ ನಾಯಕರೊಂದಿಗೆ ಮಾತುಕತೆ ಆರಂಭಿಸಿದ್ದಾರೆ.

Emergency Service

ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಿರುವ, ಇಂಡಿಯಾ ಮೈತ್ರಿಕೂಟದ ನಾಯಕರು ಬೆಂಬಲ ನೀಡುವಂತೆ ಮನವಿ ಮಾಡಿವೆ. ಅಲ್ಲದೇ, ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡಿದರೆ ಉಪಪ್ರಧಾನಿ ಹುದ್ದೆಯನ್ನು ನೀಡುತ್ತೇವೆ ಎಂದು ಆಫರ್ ನೀಡಲಾಗಿದೆ. ಆದರೆ, ನಿತೀಶ್ ಅವರು ಇಂಡಿಯಾ ಮೈತ್ರಿಕೂಟದ ಆಫರ್ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಆಂಧ್ರಪ್ರದೇಶದ ನೂತನ ಸಿಎಂ ಆಗಲಿರುವ ಚಂದ್ರಬಾಬು ನಾಯ್ದುಗೆ ಶುಭ ಕೋರಿರುವ ಇಂಡಿಯಾ ಮೈತ್ರಿಕೂಟ ನಾಯಕರು, ಸರ್ಕಾರ ರಚನೆಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡಿದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಆಫರ್ ನೀಡಿದೆ. ಆದರೆ, ಯಾವುದೇ ಕಾರಣಕ್ಕೂ ಎನ್‍ಡಿಎ ಮೈತ್ರಿಕೂಟ ಬಿಟ್ಟುಹೋಗಲ್ಲ. ಅವರೊಂದಿಗೆ ಚುನಾವಣೆಯನ್ನು ಎದುರಿಸಿದ್ದೇವೆ. ಅವರೊಂದಿಗೆ ಕೊನೆಯವರೆಗೆ ಇರುತ್ತೇವೆ ಎಂದು ಟಿಡಿಪಿ ತಿಳಿಸಿದೆ.

Bottom Add3
Bottom Ad 2