Kannada NewsKarnataka NewsNational
ವಾಯುಪಡೆಯ ಸುಖೋಯ್ ಫೈಟರ್ ಜೆಟ್ ವಿಮಾನ ಪತನ

ಪ್ರಗತಿವಾಹಿನಿ ಸುದ್ದಿ: ವಾಯುಪಡೆಯ ಸುಖೋಯ್ ಫೈಟರ್ ಜೆಟ್ ವಿಮಾನ ಪತನವಾಗಿರುವ ಘಟನೆ ನಾಸಿಕ್ನ ಶಿರಸ್ಗಾಂವ್ ಗ್ರಾಮದ ಹೊಲವೊಂದರಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಾಸಿಕ್ ವಲಯದ ವಿಶೇಷ ಇನ್ಸ್ಪೆಕ್ಟರ್ ಜನರಲ್ ಡಿ.ಆರ್.ಕರಾಲೆ ಮಾಹಿತಿ ನೀಡಿದ್ದಾರೆ.
ಭಾರತೀಯ ವಾಯುಪಡೆಯ ಸು-30 ಎಂಕೆಐ ಯುದ್ಧ ವಿಮಾನವು ಇಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದ್ದಾಗ, ಕೂಡಲೇ ಪೈಲಟ್ ಮತ್ತು ಸಹ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಸದ್ಯ ಗಾಯಾಳು ಪೈಲಟ್ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.




