Election NewsKannada NewsKarnataka NewsPolitics

ಜೂ.9ರಂದು ಆಂಧ್ರದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ: ಆಂದ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ವೈಎಸ್​​ಆರ್​​​ಪಿ ಪಕ್ಷವು ಹೀನಾಯವಾಗಿ ಸೋಲನ್ನು ಕಂಡಿದೆ.

ಸೋಲಿನ ಹೊಣೆಹೊತ್ತಿರುವ ಸಿಎಂ ಜಗನ್​​ ಮೋಹನ್​​ ರೆಡ್ಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Home add -Advt

2019ರ ವಿಧಾನಸಭಾ ಚುನಾವಣೆಯಲ್ಲಿ  ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಪಕ್ಷವು 175 ಸ್ಥಾನಗಳಲ್ಲಿ 151 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ವಿಜಯ ಸಾಧಿಸಿತ್ತು.

ಆದರೆ ಈ ಬಾರಿ ಆಂಧ್ರ ಪ್ರದೇಶದ ಒಟ್ಟು 175 ಕ್ಷೇತ್ರಗಳಲ್ಲಿ ವೈಎಸ್​​​​ಆರ್​​ಪಿ ಪಕ್ಷವು ಕೇವಲ 20 ಸ್ಥಾನಗಳಲ್ಲಿ ಗೆದ್ದಿದ್ದು, ಇನ್ನುಳಿದ ಸ್ಥಾನಗಳಲ್ಲಿ ಹೀನಾಯವಾಗಿ ಸೋಲುಂಡಿದೆ. ಅತ್ತ ಟಿಡಿಪಿ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಜೂ.9ರಂದು ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

Related Articles

Back to top button